ಕ್ರೀಡೆ

ಹ್ಯಾಟ್ರಿಕ್ ವಿಕೆಟ್ ಕೈ ತಪ್ಪಿದರೂ ವಿಶಿಷ್ಠ ಸಾಧನೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡ ಉಮೇಶ್ ಯಾದವ್

Pinterest LinkedIn Tumblr

ಹೈದರಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಮುಕ್ತಾಯವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾನುವಾರ ಭಾರತದ ವೇಗಿ ಉಮೇಶ್ ಯಾದವ್ ವಿಶಿಷ್ಠ ಸಾಧನೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

4 ಎಸೆತಗಳಲ್ಲಿ ಮೂರು ವಿಕೆಟ್ ಪಡೆಯುವ ಮೂಲಕ ಉಮೇಶ್ ಯಾದವ್ ವಿಶಿಷ್ಠ ಸಾಧನೆಯೊಂದನ್ನು ಮಾಡಿದ್ದಾರೆ. ವಿಶ್ವ ಕ್ರಿಕೆಟ್ ಈ ಸಾಧನೆ ಗೈದ ಕೆಲವೇ ಕೆಲ ಕ್ರಿಕೆಟಿಗರ ಸಾಲಿಗೆ ಇದೀಗ ಉಮೇಶ್ ಯಾದವ್ ಸೇರ್ಪಡೆಯಾಗಿದ್ದಾರೆ. ಕೆರಿಬಿಯನ್ನರ ಮೊದಲ ಇನ್ನಿಂಗ್ಸ್ ನ ಕೊನೆಯ ಎರಡು ವಿಕೆಟ್ ಗಳನ್ನು ಸತತ ಎಸೆತಗಳಲ್ಲಿ ಪಡೆದಿದ್ದ ಉಮೇಶ್ ಎರಡನೇ ಇನ್ನಿಂಗ್ಸ್ ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದಿದ್ದರೆ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದಂತಾಗುತ್ತಿತ್ತು.

ಉಮೇಶ್ ಯಾದವ್ ಮೊದಲ ಎಸೆತವನ್ನು ಕ್ರೇಗ್ ಬ್ರಾಥ್ ವೇಟ್ ಸಮರ್ಥವಾಗಿ ಎದುರಿಸಿದರು. ಈ ಮೂಲಕ ಉಮೇಶ್ ಹ್ಯಾಟ್ರಿಕ್ ಆಸೆಗೆ ತಣ್ಣೀರೆರಚಿದರು. ಆದರೆ ಎರಡನೇ ಎಸೆತದಲ್ಲಿ ಬ್ರಾಥ್ ವೇಟ್ ವಿಕೆಟ್ ಪಡೆದ ಉಮೇಶ್ ಹೊಸತೊಂದು ದಾಖಲೆಗೆ ತನ್ನ ಹೆಸರು ಸೇರಿಸಿಕೊಂಡರು.

ಇನ್ನು ಈ ಮೂಲಕ ಸತತ 4 ಎಸೆತಗಳಲ್ಲಿ ಮೂರು ವಿಕೆಟ್ ಪಡೆದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆ ವಿದರ್ಭ ಬೌಲರ್ ಪಾಲಾಯಿತು. ಈ ಹಿಂದೆ 1981 ರ ನ್ಯೂಜಿಲೆಂಡ್ ವಿರುದ್ದದ ಸರಣಿಯಲ್ಲಿ ವೆಲ್ಲಿಂಗ್ಟನ್ ನಲ್ಲಿ ರವಿಶಾಸ್ತ್ರೀ ಈ ಸಾಧನೆ ಮಾಡಿದ್ದರು. ಇದಾದ ಬಳಿಕ 1985ರಲ್ಲಿ ಅಡಿಲೇಡ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಕಪಿಲ್ ದೇವ್ ಈ ಸಾಧನೆ ಮಾಡಿದ್ದರು. ಇದೀಗ ಈ ಪಟ್ಟಿಗೆ ಉಮೇಶ್ ಯಾದವ್ ಸೇರ್ಪಡೆಯಾಗಿದ್ದಾರೆ.

Comments are closed.