ಮನೋರಂಜನೆ

ವಿಂತಾ ನಂದಾ ಮಾಡಿರುವ ಅತ್ಯಾಚಾರ ಆರೋಪದ ವಿರುದ್ಧ ಮಾನಹಾನಿ ನೋಟಿಸ್ ಕಳುಹಿಸಿದ ನಟ ಅಲೋಕ್ ನಾಥ್

Pinterest LinkedIn Tumblr

ಮುಂಬೈ: ದೇಶಾದ್ಯಂತ ಪಸರಿಸಿರುವ #MeToo ಅಭಿಯಾನದಲ್ಲಿ ಬಾಲಿವುಡ್ ನಟರ ವ್ಯಕ್ತಿತ್ವ ಬಯಲಾಗುತ್ತಿದ್ದು, ಲೇಖಕಿ ಹಾಗೂ ನಿರ್ಮಾಪಕಿ ವಿಂತಾ ನಂದಾ ಮಾಡಿರುವ ಅತ್ಯಾಚಾರ ಆರೋಪದ ವಿರುದ್ಧ ನಟ ಅಲೋಕ್ ನಾಥ್ ಮಾನಹಾನಿ ನೋಟಿಸ್ ಕಳುಹಿಸಿದ್ದಾರೆ.

ತಮ್ಮ ವಿರುದ್ಧದ ಅತ್ಯಾಚಾರ ಆರೋಪವನ್ನು ನಿರಾಕರಿಸಲು ಆಗುತ್ತಿಲ್ಲ, ಒಪ್ಪಲು ಆಗುತ್ತಿಲ್ಲ ಎಂದು ಈ ಹಿಂದೆ ಅಲೋಕ್ ನಾಥ್ ಹೇಳಿಕೆ ನೀಡಿದ್ದರು.

ಅಲೋಕ್ ನಾಥ್ ಪರ ವಕೀಲರು ಆಂದೇರಿ ನ್ಯಾಯಾಲಯದಲ್ಲಿ ವಿಂತಾ ನಂದಾ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದು, ಮಾನಹಾನಿ ನೋಟಿಸ್ ರವಾನಿಸಿದ್ದಾರೆ.

ಈ ಸಂಬಂಧ ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿರುವ ಅಲೋಕ್ ನಾಥ್ ಪರ ವಕೀಲರು, ಆರೋಪ ಮಾಡಲು ಯಾವುದೇ ವ್ಯಕ್ತಿಯೂ 19 ವರ್ಷ ಕೂರುವುದಿಲ್ಲ. ವಿಂತಾ ನಂದಾ 19 ವರ್ಷದ ನಂತರ ಮಾಡುತ್ತಿರುವ ಆರೋಪ ತಪ್ಪಿನಿಂದ ಕೂಡಿದೆ. ಅತ್ಯಾಚಾರ ಆರೋಪದ ಹಿಂದೆ ಅಲೋಕ್ ನಾಥ್ ಅವರ ವರ್ಚಸ್ಸು ಕುಂದಿಸುವ ಸಂಚು ಅಡಗಿದೆ ಎಂದು ಹೇಳಿದ್ದಾರೆ.

Comments are closed.