ಮನೋರಂಜನೆ

ರಶ್ಮಿಕಾ ಮಂದಣ್ಣ ಬದಲು “ವೃತ್ರ’ ಚಿತ್ರಕ್ಕೆ ನಿತ್ಯಾಶ್ರೀ ಎಂಬ ಅಪ್ಪಟ ಕನ್ನಡದ ಹುಡುಗಿ…

Pinterest LinkedIn Tumblr


ನಟಿ ರಶ್ಮಿಕಾ ಮಂದಣ್ಣ “ವೃತ್ರ’ ಚಿತ್ರದಿಂದ ಹೊರಬಂದ ಸುದ್ದಿಯನ್ನು ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ರಶ್ಮಿಕಾ ಮಂದಣ್ಣ ಅವರ ಜಾಗಕ್ಕೆ ಯಾವ ನಟಿ ಬರುತ್ತಾರೆ ಎಂಬ ಪ್ರಶ್ನೆ ಸಹಜವಾಗಿತ್ತು. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. “ವೃತ್ರ’ ಚಿತ್ರಕ್ಕೆ ನಿತ್ಯಾಶ್ರೀ ಎಂಬ ಅಪ್ಪಟ ಕನ್ನಡದ ಹುಡುಗಿಯೊಬ್ಬಳು ಆಯ್ಕೆಯಾಗಿದ್ದಾರೆ. ಅವರಿಗೆ ಇದು ಕನ್ನಡದಲ್ಲಿ ಎರಡನೇ ಚಿತ್ರ. ಕಲಾತ್ಮಕ ಚಿತ್ರವೊಂದರಲ್ಲಿ ನಟಿಸಿದ್ದ ನಿತ್ಯಾಶ್ರೀಗೆ “ವೃತ್ರ’ ಮೊದಲ ಕಮರ್ಷಿಯಲ್‌ ಚಿತ್ರ ಎಂಬುದು ವಿಶೇಷ. ಇನ್ನು, ತಮಿಳು ಚಿತ್ರಗಳಲ್ಲೂ ನಟಿಸಿರುವ ನಿತ್ಯಾಶ್ರೀ, ಮಣಿರತ್ನಂ ನಿರ್ದೇಶನದ ಚಿತ್ರವೊಂದರಲ್ಲಿ ಸಣ್ಣ ಪಾತ್ರ ಮಾಡಿದ್ದಾರೆ.

ಅದರೊಂದಿಗೆ ಹೊಸಬರ ಚಿತ್ರದಲ್ಲೂ ನಟಿಸಿದ ಅನುಭವ ಇದೆ. ಈಗ “ವೃತ್ರ’ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಈ ಕುರಿತು ಹೇಳಿಕೊಳ್ಳುವ ನಿತ್ಯಾಶ್ರೀ, “ಒಳ್ಳೇ ಕಥೆ, ಒಳ್ಳೆಯ ಪಾತ್ರ ಎಲ್ಲದ್ದಕ್ಕೂ ಹೆಚ್ಚಾಗಿ ಒಳ್ಳೆಯ ತಂಡ ಸಿಕ್ಕಿದ್ದರಿಂದಲೇ ನಾನು ಚಿತ್ರದಲ್ಲಿ ನಟಿಸುತ್ತಿದ್ದೇನೆ. ಹೊಸಬಗೆಯ ಕಥೆ ಇಲ್ಲಿದೆ. ನಾಯಕಿ ಪ್ರಧಾನ ಚಿತ್ರವಾಗಿರುವುದರಿಂದ ಹೆಚ್ಚು ಸ್ಕೋಪ್‌ ಇದೆ’ ಎಂಬುದು ನಿತ್ಯಾಶ್ರೀ ಮಾತು.

ಇನ್ನು, ಈ ಚಿತ್ರವನ್ನು ಗೌತಮ್‌ ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೆ ಇದು ಚೊಚ್ಚಲ ಸಿನಿಮಾ. ಚೆನ್ನೈನಲ್ಲಿ ಕಾಲೇಜು ಮುಗಿಸಿಕೊಂಡು ನೇರವಾಗಿ ಪರಂವಾ ಸ್ಟುಡಿಯೋ ಸೇರಿದ್ದ ಗೌತಮ್‌, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇದೆ. ಆ ಸಂದರ್ಭದಲ್ಲೇ ಅವರೊಂದು ಕಥೆ ಕೂಡಾ ಮಾಡಿಟ್ಟುಕೊಂಡಿದ್ದರು. ಹಿಂದೆ, ಆ ಕಥೆಯನ್ನು ರಶ್ಮಿಕಾ ಅವರಿಗೆ ಹೇಳಿದಾಗ ಅವರು ಕಥೆ ಇಷ್ಟಪಟ್ಟು ನಟಿಸಲು
ಒಪ್ಪಿದ್ದರು. ಸಹಜವಾಗಿಯೇ ಖುಷಿಯಾಗಿದ್ದ ಗೌತಮ್‌ಗೆ, ಬಿಝಿ ಹಿನ್ನೆಲೆಯಲ್ಲಿ ರಶ್ಮಿಕಾ ಚಿತ್ರದಲ್ಲಿ ನಟಿಸಲು ಸಾಧ್ಯವಾಗದೆ ಹೊರಬಂದಿದ್ದಾರೆ. ಗೌತಮ್‌ ಈಗ ರಶ್ಮಿಕಾ ಅವರ ಜಾಗಕ್ಕೆ ನಿತ್ಯಾಶ್ರೀ ಅವರನ್ನು ಹುಡುಕಿ ಆಯ್ಕೆ ಮಾಡಿದ್ದಾರೆ.

Comments are closed.