ಮನೋರಂಜನೆ

ಮತ್ತೊಮ್ಮೆ ‘ಪ್ರಧಾನಿ ಕಳ್ಳ’ ಎಂದು ಟ್ವೀಟ್​ ಮಾಡಿದ ನಟಿ ರಮ್ಯಾ

Pinterest LinkedIn Tumblr

ಲಕ್ನೋ : ಪ್ರಧಾನಿಯನ್ನು ‘ಕಳ್ಳ; ಎಂದು ಟ್ವಿಟರ್​ನಲ್ಲಿ ಅವಹೇಳನ ಮಾಡಿದ ರಮ್ಯಾ ವಿರುದ್ಧ ದೇಶ ದ್ರೋಹ ಪ್ರಕರಣ ದಾಖಲಾಗಿತ್ತು. ಆದರೆ, ಇದಕ್ಕೆ ಸೊಪ್ಪು ಹಾಕದ ಕಾಂಗ್ರೆಸ್​​ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಮಾತ್ರ ತನ್ನ ನಿಲುವಿಗೆ ಬದ್ಧರಾಗಿದ್ದಾರೆ.

ತಮ್ಮ ವಿರುದ್ಧ ಎಫ್​ಐಆರ್​ ದಾಖಲಾಗಿ, ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಟೀಕೆಗೆ ಗುರಿಯಾಗಿದ್ದರು. ಆದರೆ ಇದಕ್ಕೆ ಜಗ್ಗದ ರಮ್ಯಾ ಮತ್ತೊಮ್ಮೆ ‘ಪ್ರಧಾನಿ ಕಳ್ಳ’ ಎಂದು ಟ್ವೀಟ್​ ಮಾಡುವ ಮೂಲಕ ಟೀಕಾಕಾರರ ಬೆದರಿಕೆಗೆ ಬೆದರುವುದಿಲ್ಲ ಎಂದು ತೋರಿಸಿದ್ದಾರೆ.

“ನನ್ನ ಟ್ವೀಟ್​ಗೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಇದೇ ರೀತಿ ನಿಮ್ಮ ಸಹಕಾರವಿರಲಿ. ಮುಂದೆ ಕೂಡ ಇದೇ ಶೈಲಿಯಲ್ಲಿ ಟ್ವೀಟ್​ ಮುಂದುವರೆಸುತ್ತೇನೆ. ಭಾರತ ದೇಶದ್ರೋಹ ಕಾನೂನಿನಿಂದ ದೂರವಿರಬೇಕು. ಈ ಕಾನೂನು ಅನಾದಿಕಾಲದಿಂದ ಇದ್ದು, ಇದನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ” ಎಂದು ಟ್ವೀಟ್​ ಮಾಡಿದ್ದಾರೆ.

Comments are closed.