ಮನೋರಂಜನೆ

ತನ್ನ ಸಿಬ್ಬಂದಿ ಜೊತೆ ಹಾಡವೊಂದಕ್ಕೆ ಸನ್ನಿ ಲಿಯೋನ್ ಸ್ಟೆಪ್!

Pinterest LinkedIn Tumblr


ಮುಂಬೈ: ಬಾಲಿವುಡ್ ಮೋಹಕ ನಟಿ ಸನ್ನಿ ಲಿಯೋನ್ ತನ್ನ ಸಹ ಸಿಬ್ಬಂದಿಗಳೊಂದಿಗೆ ಸ್ಟೆಪ್ ಹಾಕಿದ್ದ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲಾತಾಣದಲ್ಲಿ ಸಖತ್ ವೈರಲ್ ಆಗಿದೆ.

ಸನ್ನಿ ಬಿಳಿ ಬಣ್ಣದ ಕ್ಯಾಪ್ ಧರಿಸಿ, ಕೆಂಪು ಹಾಗೂ ನೀಲಿ ಮಿಶ್ರಿತ ಜರ್ಕಿನ್, ಮತ್ತು ಜಿನ್ಸ್ ಧರಿಸಿ ತನ್ನ ಸಿಬ್ಬಂದಿಗಳೊಂದಿಗೆ ‘ಬೋಲೋ ತಾರಾ ರಾ ರಾ’ ಪಂಜಾಬಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿ ಎಂಜಾಯ್ ಮಾಡಿದ್ದಾರೆ. ಆ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಈ ವಿಡಿಯೋವನ್ನು ಶನಿವಾರ ಅಪ್ಲೋಡ್ ಮಾಡಿದ್ದು, 22.35 ಲಕ್ಷ ಮಂದಿ ನೋಡಿದ್ದು 6 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.

ಸದ್ಯಕ್ಕೆ ಸನ್ನಿ ತಮಿಳು ಚಿತ್ರ ವೀರಮ್ಮದೇವಿಯಲ್ಲಿ ಕಾಣಿಸಿಕೊಳ್ಳಲಿದ್ದು, ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಅದರ ನಡುವೆಯೂ ಸನ್ನಿ ತನ್ನ ಮೂವರು ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದಾರೆ.

Comments are closed.