ಮನೋರಂಜನೆ

ತನ್ನ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ ಕಿಚ್ಚ ಸುದೀಪ್ ! ಅಭಿಮಾನಿಗಳಿಗೆ ಹೇಳಿದ ಕಿವಿ ಮಾತೇನು ಗೊತ್ತೇ..?

Pinterest LinkedIn Tumblr

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತೇನೆ ಎನ್ನುವ ಮೂಲಕ ತಮ್ಮ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ.

ಕಿಚ್ಚ ಸುದೀಪ್ ಕಳೆದ ವರ್ಷ ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದ್ದಿಲ್ಲ ಎಂದು ಗೂಗಲ್ ಪ್ಲಸ್ ನಲ್ಲಿ ಪೋಸ್ಟ್ ಪ್ರಕಟಿಸಿದ್ದರು. ಆದರೆ ಈ ಬಾರಿ ತಮ್ಮ ಆಸೋಸಿಯೇಟ್ ಮೂಲಕ ಹುಟ್ಟುಹಬ್ಬ ಆಚರಿಸಿಕೊಳ್ಳುವುದಾಗಿ ಕಿಚ್ಚ ಸುದೀಪ್ ಹೇಳಿದ್ದಾರೆ.

ಕಳೆದ ವರ್ಷ ಸುದೀಪ್ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿರಲಿಲ್ಲ. ಆದರೆ ಈ ವರ್ಷ ತಮ್ಮ ಹುಟ್ಟುಹಬ್ಬದ ದಿನವನ್ನು ಅಭಿಮಾನಿಗಳಿಗೆ ಮೀಸಲಿಡಲಿದ್ದಾರೆ. ಆದರೆ ಆ ದಿನದಂದು ಖರ್ಚು ಮಾಡಬಾರದು, ಅಡಂಬರವಿರಬಾರದು. ನನಗಂತ ಏನೂ ತರಬೇಡಿ, ಶುಭಾಶಯ ತಿಳಿಸಿ ಅಷ್ಟೇ ಸಾಕು ಎಂದು ಸುದೀಪ್ ಮನವಿ ಮಾಡಿಕೊಂಡಿದ್ದಾರೆ.

ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಭೇಟಿ ಮಾಡಲು ದುಬಾರಿ ಹಾಗೂ ವಿಶೇಷವಾದ ಉಡುಗೊರೆಗಳನ್ನು ತರುತ್ತಾರೆ. ಆದರೆ ಈ ಬಾರಿ ಸುದೀಪ್ ಇತಂಹ ದುಬಾರಿ ಉಡುಗೊರೆಯನ್ನು ಸ್ವೀಕರಿಸುವುದ್ದಿಲ್ಲ. ಈ ಬಾರಿ ಯಾರು ಉಡುಗೊರೆ ತರುವಂತಿಲ್ಲ, ತಂದರೂ ನಾನು ಸ್ವೀಕರಿಸುವುದ್ದಿಲ್ಲ ಎಂದು ಸುದೀಪ್ ನೇರವಾಗಿ ಹೇಳಿದ್ದಾರೆ.

ತಮ್ಮ ಹುಟ್ಟಹಬ್ಬದಂದು ಕೆಜಿಗಟ್ಟಲೇ ಕೇಕ್ ಹಾಗೂ ಲಕ್ಷಾಂತರ ಮೌಲ್ಯದ ಹಾರ, ಪಟಾಕಿಗಳನ್ನು ತರುವಂತಿಲ್ಲ ಹಾಗೂ ಯಾವುದು ವಸ್ತುಗಳನ್ನು ತರುವಂತಿಲ್ಲ. ತಮ್ಮ ಹುಟ್ಟುಹಬ್ಬದಂದು ಖರ್ಚು ಮಾಡುವ ಹಣವನ್ನು ಉಳಿಸಿ. ಕೊಡಗಿನ ಜನರಿಗೆ ಸಹಾಯವಾಗುವ ರೀತಿಯಲ್ಲಿ ಆ ಹಣವನ್ನು ಉಪಯೋಗಿಸಿ ಎಂದು ತಿಳಿಸಿದ್ದಾರೆ.

ನೀವು ನಮಗೆ ಸಿಗುವುದು ಒಂದು ದಿನ ಮಾತ್ರ. ಆದರೆ ಆ ದಿನವನ್ನು ನೀವು ಬೇಡವೆಂದರೆ ನಮ್ಮ ಅಭಿಮಾನಕ್ಕೆ ಅರ್ಥ ಸಿಗಲ್ಲ ಎಂದು ಅಭಿಮಾನಿಗಳು ಸುದೀಪ್ ತಮ್ಮ ಹುಟ್ಟುಹಬ್ಬ ಆಚರಿಸುವಂತೆ ಒತ್ತಾಯಿಸಿದ್ದರು. ಈ ಕಾರಣಕ್ಕಾಗಿ ಸುದೀಪ್ ತಮ್ಮ ಅಭಿಮಾನಿಗಳಿಗಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ.

Comments are closed.