
ಪುಣೆ: ನಕ್ಸಲರೊಂದಿಗೆ ಸಂಪರ್ಕ ಹೊಂದಿರುವ ಶಂಕೆಯಿಂದಾಗಿ ದೇಶದ ಹಲವೆಡೆ ಇಂದು ಪ್ರಸಿದ್ಧ ಹೋರಾಟಗಾರರ ಮನೆ ಮೇಲೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಪುಣೆಯಲ್ಲಿ ನಡೆದ ಭೀಮಾ ಕೋರೆ ಗಾಂವ್ ಹಿಂಸಾಚಾರದ ತನಿಖೆಯ ಭಾಗವಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಹೈದ್ರಾಬಾದಿನ ಎಡಪಂಥೀಯ ಹೋರಾಟಗಾರ, ಕ್ರಾಂತಿಕಾರಿ ಕವಿ ವರವರ ರಾವ್ , ಮುಂಬೈಯಲ್ಲಿ ವೆರ್ನಾನ್ ಗೊನ್ಜಾಲ್ವ್ಸ್, ಅರುಣ್ ಫೆರೀರಾ, ಛತ್ತೀಸ್ ಗಢದಲ್ಲಿ ಟ್ರೇಡ್ ಯೂನಿಯನ್ ಹೋರಾಟಗಾರ್ತಿ ಸುಧಾ ಭಾರಾದ್ವಾಜ್, ದೆಹಲಿಯಲ್ಲಿ ನಾಗರಿಕ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ 31 ರಂದು ಇಲ್ಘರ್ ಪರಿಷದ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜೂನ್ ನಲ್ಲಿ ಐವರನ್ನು ಬಂಧಿಸಲಾಗಿತ್ತು. ಈ ಪೈಕಿ ಒಬ್ಬರ ಮನೆಯಲ್ಲಿ ವರವರ ರಾವ್ ಅವರ ಹೆಸರು ಕತ್ತರಿಸಿದ ರೀತಿಯಲ್ಲಿದ್ದ ಕಾಗದ ಪತ್ರವೊಂದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಭೀಮಾ ಕೋರೆಗಾಂವ್ ನಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿದ ನಕ್ಸಲ್ ರೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಮೇರೆಗೆ ಜೂನ್ ನಲ್ಲಿ ಐವರನ್ನು ಬಂಧಿಸಲಾಗಿತ್ತು ಎಂದು ಘಟನೆ ನಂತರ ವಿಶ್ರಾಮ್ ಬಾಗ್ ಠಾಣೆಯಲ್ಲಿ ದಾಖಲಿಸಿರುವ ಎಫ್ ಐರ್ ನಲ್ಲಿ ಉಲ್ಲೇಖಿಸಲಾಗಿತ್ತು.
ಜೂನ್ ನಲ್ಲಿ ಮುಂಬೈ, ನಾಗಾಪುರ ಹಾಗೂ ದೆಹಲಿಯಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಪೊಲೀಸರು ದಲಿತಪರ ಹೋರಾಟಗಾರ ಸುಧೀರ್ ದಾವಳೆ, ವಕೀಲ ಸುರೇಂದ್ರ ಗಡ್ಲಂಗ್, ಹೋರಾಟಗಾರರಾದ ಮಹೇಶ್ ರಾವೌತ್, ಮತ್ತು ಸೋಮಸೇನ ಹಾಗೂ ಮುರ್ನಿಕಾ ಅವರನ್ನು ಬಂಧಿಸಿದ್ದರು.
ತನಿಖೆ ಹಿನ್ನೆಲೆಯಲ್ಲಿ ಈ ಐವರೊಂದಿಗೆ ಪ್ರತ್ಯೇಕ್ಷವಾಗಿ ಹಾಗೂ ಪರೋಕ್ಷವಾಗಿ ಸಂಪರ್ಕ ಹೊಂದಿರುವ ಎಲ್ಲಾ ಹೋರಾಟಗಾರರ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.