
ಉತ್ತರ ಪ್ರದೇಶ: ಮಹಿಳಾ ಕೇಂದ್ರಿತ ಕಾನೂನು ಹಾಗೂ ದೇಶದಲ್ಲಿ ಹೆಚ್ಚುತ್ತಿರುವ ಮಹಿಳಾವಾದಿ ನಿಲುವುಗಳಿಂದ ಬೇಸತ್ತ 150 ಪುರುಷರು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಪಿಶಾಚಿನಿ ಮುಕ್ತಿ ಪೂಜೆ ಹಾಗೂ ಶ್ರಾದ್ಧವನ್ನು ನಡೆಸಿದ್ದಾರೆ.
ಮಹಿಳಾವಾದಿ ಪತ್ನಿಯರಿಂದ ಮುಕ್ತಿ ಪಡೆಯಲು ಸೇವ್ ಇಂಡಿಯನ್ ಫ್ಯಾಮಿಲಿ ಹಾಗೂ ದಾಮನ್ ಕ್ಷೇಮಾಭಿವೃದ್ಧಿ ಸಂಘ ಆ.15 ರಂದು ಈ ಧಾರ್ಮಿಕ ಕ್ರಿಯೆಗಳನ್ನು ಆಯೋಜಿಸಿತ್ತು. ಮಹಿಳಾವಾದಿ ಪತ್ನಿಯರಿಂದ ಬೇಸತ್ತ 150 ಪುರುಷರು ಪಿಶಾಚಿನಿ ಮುಕ್ತಿ ಪೂಜೆ, ಶ್ರಾದ್ಧಗಳನ್ನು ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಮಹಿಳಾವಾದದಿಂದ ನಮ್ಮ ವೈವಾಹಿಕ ಜೀವನ ಮುರಿದುಬಿದ್ದಿದೆ ಆದ್ದರಿಂದ ಈ ರೀತಿ ಮಾಡಿದ್ದೆವೆ ಎಂದು ಹೇಳಿದ್ದಾರೆ.
“ಮಹಿಳೆಯರಿಗಿಂತ ಪುರುಷರು ಶ್ರೇಷ್ಠ ಎಂದು ತೋರ್ಪಡಿಸುವುದಕ್ಕೆ ಈ ಕಾರ್ಯಕ್ರಮ ಹಮ್ಮಿಕೊಂಡಿರಲಿಲ್ಲ, ನಾವು ಸಮಾನತೆ ಬಯಸುತ್ತೇವೆ, ಆದರೆ ಮಹಿಳಾವಾದದಿಂದ ಬೇಸತ್ತಿದ್ದೇವೆ ಎಂದು ಹೇಳಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಅಮಿತ್ ದೇಶಪಾಂಡೆ ಈ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದ್ದು, ಈ ದೇಶದ ಪುರುಷರು ಸಮಾನತೆ ಬಯಸುತ್ತಾರೆ. ಆದರೆ ತ್ಯಾಜ್ಯದಂತೆ ನಡೆಸಿಕೊಳ್ಳುವುದನ್ನು ಸಹಿಸುವುದಿಲ್ಲ. ಇಲ್ಲಿ ಬಂದಿರುವ 150 ಜನರು ಪುರುಷರ ಸಮಾನತೆಗಾಗಿ ಹೋರಾಟ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
Comments are closed.