ಮನೋರಂಜನೆ

NRI ಡಾಕ್ಟರ್ ಜೊತೆ ಮಿಲ್ಕಿ ಬ್ಯೂಟಿ ತಮನ್ನಾ ಮದುವೆ!

Pinterest LinkedIn Tumblr


ಹೈದರಾಬಾದ್: ಮಿಲ್ಕಿ ಬ್ಯೂಟಿ ತಮನ್ನಾ ಬಾಟಿಯಾ ಅಮೆರಿಕದಲ್ಲಿರುವ ಡಾಕ್ಟರ್ ಒಬ್ಬರ ಜೊತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ಅಮೆರಿಕದಲ್ಲಿರುವ ಎನ್‍ಆರ್‍ಐ ಡಾಕ್ಟರ್, ವೈದ್ಯ ವೃತ್ತಿ ಅಲ್ಲದೇ ಬೇರೆ ವ್ಯವಹಾರಗಳನ್ನು ಕೂಡ ಮಾಡುತ್ತಿದ್ದಾರೆ. ಇಬ್ಬರು ಒಬ್ಬರಿಗೊಬ್ಬರನ್ನು ಇಷ್ಟಪಡುತ್ತಿದ್ದು, ಶೀಘ್ರವೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ತಮನ್ನಾ ಹಾಗೂ ಆ ವೈದ್ಯರ ಕುಟುಂಬಕ್ಕೆ ಇವರ ಪ್ರೀತಿ ಒಪ್ಪಿಗೆ ಇದ್ದು, ಈಗಾಗಲೇ ಮದುವೆಯ ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ನಿಶ್ಚಿತಾರ್ಥದ ಮುಹೂರ್ತ ನಿಗದಿ ಮಾಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಸದ್ಯ ತಮನ್ನಾ ತಮ್ಮ ಮದುವೆ ಹಾಗೂ ಎನ್‍ಆರ್‍ಐ ಡಾಕ್ಟರ್ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ಇವರ ಮದುವೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಟಾಲಿವುಡ್, ಕಾಲಿವುಡ್ ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ.

ತಮನ್ನಾ ಈಗ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಸೈರಾ ನರಸಿಂಹ ರೆಡ್ಡಿ’ ಹಾಗೂ ಹಿಂದಿಯ ‘ಕ್ವೀನ್’ ಚಿತ್ರದ ರಿಮೇಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Comments are closed.