ಮನೋರಂಜನೆ

ಪ್ರಭಾಸ್-ಅನುಷ್ಕಾ ಶೆಟ್ಟಿ​ ಮದುವೆ ವದಂತಿ ಕುರಿತು ಅನುಷ್ಕಾ ಅಮ್ಮ ಹೇಳಿದ್ದೇನು?

Pinterest LinkedIn Tumblr


ನವದೆಹಲಿ: ಮಿಸ್ಟರ್​ ಫರ್ಫೆಕ್ಟ್​ ಪ್ರಭಾಸ್​ ಹಾಗೂ ದೇವಸೇನಾ ಅನುಷ್ಕಾ ಶೆಟ್ಟಿ ಟಾಲಿವುಡ್​ನ ಯಶಸ್ವಿ ಜೋಡಿ. ಇವರಿಬ್ಬರ ಮದುವೆ ಕುರಿತು ಈಗಾಗಲೇ ಸಾಕಷ್ಟು ಚರ್ಚೆಯಾಗುತ್ತಿದೆ. ಕೆಲವರು ಇದನ್ನು ವದಂತಿಯೆಂದರೆ, ಹಲವರು ಅವರಿಬ್ಬರ ನಡುವೆ ಪ್ರೀತಿ ಇದೆ ಎಂದೆಲ್ಲಾ ಮಾತನಾಡಿಕೊಳ್ಳುತ್ತಿದ್ದಾರೆ. ಅದೇನೆ ಇರಲಿ ಇದೀಗ ಇದೇ ವಿಚಾರವಾಗಿ ಅನುಷ್ಕಾ ತಾಯಿ ಪ್ರಫುಲ್ಲಾ ಶೆಟ್ಟಿ ತುಟಿ ಬಿಚ್ಚಿದ್ದಾರೆ.

ಈಗಾಗಲೇ ಇಬ್ಬರು ಕಲಾವಿದರು ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದು ಹೇಳಿ ಸ್ಪಷ್ಟನೆ ನೀಡಿದ್ದರೂ ವದಂತಿಗೆ ಮಾತ್ರ ಇನ್ನೂ ಬ್ರೇಕ್​ ಬಿದ್ದಂತೆ ಕಾಣುತ್ತಿಲ್ಲ. ಅನುಷ್ಕಾ ಅವರ ತಾಯಿ ಪ್ರಭಾಸ್​​ ಕುರಿತು ಮೆಚ್ಚಗೆಯ ಮಾತುಗಳನ್ನಾಡಿದ್ದು, ಮದುವೆ ಕುರಿತಾದ ವದಂತಿ ಸುಳ್ಳೆಂದು ಹೇಳಿದ್ದಾರೆ.

ಅವರಿಬ್ಬರೂ ಸ್ಟಾರ್​ ಕಲಾವಿದರು. ಒಟ್ಟಿಗೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಭಾಸ್​ ರೀತಿಯ ಮಿಸ್ಟರ್​ ಪರ್ಫೆಕ್ಟ್​ ಆಗಿರುವ ವರನನ್ನು ಅನುಷ್ಕಾಗೆ ಪಡೆಯಲು ಇಷ್ಟಪಡುತ್ತೇನೆ. ಆದರೆ, ಅವರಿಬ್ಬರು ಒಳ್ಳೆಯ ಸ್ನೇಹಿತರು. ಅವರಿಬ್ಬರ ಮದುವೆ ಬಗ್ಗೆ ಹರಡುತ್ತಿರುವ ವದಂತಿಗಳನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.

ಬಾಹುಬಲಿ ಭಾಗ ಒಂದು ಮತ್ತು ಎರಡರಲ್ಲಿ ಪ್ರಭಾಸ್​ ಹಾಗೂ ಅನುಷ್ಕಾ ಅವರ ಕೆಮಿಸ್ಟ್ರಿ ತೆರೆಯ ಮೇಲೆ ಸಖತ್ತಾಗಿ ಮೂಡಿಬಂದಿದ್ದರಿಂದ ಅವರಿಬ್ಬರ ನಡುವೆ ಪ್ರೀತಿ ಶುರುವಾಗಿದೆ ಮದುವೆಯೂ ಮಾಡಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು. ಸದ್ಯ ಅನುಷ್ಕಾ ಅವರು ಭಾಗಮತಿ ಎಂಬ ಹಾರರ್​ ಚಿತ್ರದಲ್ಲಿ ನಿರತರಾಗಿದ್ದರೆ, ಪ್ರಭಾಸ್​ ಸಾಹೋ ಚಿತ್ರದಲ್ಲಿ ಬಿಜಿಯಾಗಿದ್ದಾರೆ.

Comments are closed.