ಕರ್ನಾಟಕ

ಹುಡುಗಿ ಚೆನ್ನಾಗಿದ್ದಾಳೆ ಎಂದು ಫೋಟೊ ಕ್ಲಿಕ್ಕಿಸಿದ: ಮುಂದೇನಾಯಿತು ಗೊತ್ತಾ?

Pinterest LinkedIn Tumblr


ಬೆಂಗಳೂರು: ಹುಡುಗಿ ಚೆನ್ನಾಗಿದ್ದಾಳೆ ಎಂದು ತನ್ನ ಮೊಬೈಲ್​ನಲ್ಲಿ ಫೋಟೋ ತೆಗೆದವ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.

ಮೆಟ್ರೋ ನಿಲ್ದಾಣದಲ್ಲಿ ಸ್ನೇಹಿತೆಗಾಗಿ ಕಾಯುತ್ತಾ ನಿಂತಿದ್ದ ಯುವತಿಯ ಫೋಟೊ ಕ್ಲಿಕ್ಕಿಸಿದ ಅಲ್ಲಿನ ಒಡಿಶಾ ಮೂಲದ ಸೆಕ್ಯುರಿಟಿ ಗಾರ್ಡ್​ ರಾಮಚಂದ್ರನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ವಿಚಾರಣೆ ವೇಳೆ “ಯುವತಿ ಚೆನ್ನಾಗಿದ್ದಾಳೆ” ಎಂದು ಫೋಟೊ ತೆಗೆದಿರುವುದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ. ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಏನಿದು ಪ್ರಕರಣ?
ನಾಗಸಂದ್ರ ಮೆಟ್ರೋ ನಿಲ್ದಾಣಕ್ಕೆ ಹಲಸೂರಿನಿಂದ ಬಂದಿದ್ದ ಯುವತಿ ತನ್ನ ಸ್ನೇಹಿತೆಗಾಗಿ ನಿಲ್ದಾಣದಲ್ಲಿ ಕಾಯುತ್ತಿದ್ದಳು. ಈ ವೇಳೆ ಆರೋಪಿ ತನ್ನ ಮೊಬೈಲ್‌ನಲ್ಲಿ ಸಂತ್ರಸ್ತೆಯ ಫೋಟೊಗಳನ್ನು ಕ್ಲಿಕ್ಕಿಸಲು ಆರಂಭಿಸಿದ್ದಾನೆ. ಫೋಟೊ ಸೆರೆ ಹಿಡಿಯುವಾಗ ಫ್ಲಾಶ್​ ಬಂದ ಕಾರಣ ಯುವತಿಯ ಗಮನಕ್ಕೆ ಬಂದಿದೆ. ಕೂಡಲೇ ಯುವತಿ ಆತನ ಬಳಿ ಹೋಗಿ ಮೊಬೈಲ್​ ನೀಡುವಂತೆ ಕೇಳಿದ್ದಾಳೆ. ಗಾಬರಿಗೊಂಡ ರಾಮಚಂದ್ರ ಅಲ್ಲಿಂದ ಕಾಲ್ಕಿತ್ತ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ

Comments are closed.