ಮನೋರಂಜನೆ

ವೈರಲ್ ಆದ ಶಾರುಖ್ ಖಾನ್ ಪುತ್ರಿಯ ಇನ್ನೊಂದು ಚಿತ್ರ!

Pinterest LinkedIn Tumblr


ದೆಹಲಿ: ಸೋಶಿಯಲ್ ಮಿಡಿಯಾಗಳಲ್ಲಿ ಸಕ್ರೀಯವಾಗಿರುವ ಬಾಲಿವುಡ್ ಬಾದ್‌ಶಾ ಶಾರುಖ್‌ ಖಾನ್‌ ಪತ್ನಿ ಗೌರಿ ಖಾನ್ ಹಲವು ಫೋಟೋಗಳನ್ನು ಶೇರು ಮಾಡುತ್ತಿರುತ್ತಾರೆ. ತಮ್ಮ ಮಕ್ಕಳ ಫೋಟೋ ಕೂಡ ಸೋಶಿಯಲ್ ಮಿಡಿಯಾಗಳಲ್ಲಿ ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಈಗ ತಮ್ಮ ಮಗಳು ಸುಹಾನ ಖಾನ್‌ಳೊಂದಿಗಿರುವ ಫೋಟೋವನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಮಗಳು ಸುಹಾನಳೊಂದಿಗೆ ಉಪಹಾರ ಸೇವಿಸುತ್ತಿರುವ ಚಿತ್ರವನ್ನು ಟ್ವೀಟರ್‌ನಲ್ಲಿ ಅಪ್ಲೋಡ್ ಮಾಡಿ, ನ್ಯೂಯಾರ್ಕ್ ಟೈಮ್ಸ್ ಎಂದು ಅಡಿ ಬರಹ ಕೊಟ್ಟಿದ್ದರು. ಸುಹಾನ ಅಭಿಮಾನಿಗಳು ವಿವಿಧ ಬಗೆಗಳಲ್ಲಿ ಟ್ವೀಟ್‌ಗೆ ಪ್ರತಿಕ್ರೀಯೆ ನೀಡಿದ್ದು, ಸುಹಾನ ಇತ್ತೀಚಿನ ದಿನಗಳಲ್ಲಿ ಗ್ಲಾಮರಸ್‌ ಆಗಿ ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ.

ಶಾರುಖ್ ಖಾನ್ ಕೂಡ ತನ್ನ ಪತ್ನಿಯ ಫೋಟೋ ರೀ ಟ್ವೀಟ್ ಮಾಡಿದ್ದು, ನ್ಯೂಯಾರ್ಕ್‌ ಟೈಮ್ಸ್ ಒಳ್ಳೆಯ ಸುದ್ದಿ ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ. ಸುಹಾನಾ ಖಾನ್ ಕಲಿಯುತ್ತಿರುವ ಇಂಗ್ಲೆಂಡಿನ ಅಡಿಂಗ್ಲೆ ಕಾಲೇಜಿನ ಕಾರ್ಯಕ್ರಮದಲ್ಲಿ ತೆಗೆದ ಫೋಟೋ ಎಂದು ತಿಳಿದು ಬಂದಿದೆ.

Comments are closed.