ಮನೋರಂಜನೆ

ಸನ್ನಿ ವೆಬ್​ ಸೀರಿಸ್​ಗೆ ಸಂಕಷ್ಟ: ಶೀರ್ಷಿಕೆಯಿಂದ ‘ಕೌರ್’​ ಎಂಬ ಪದ ತೆಗೆಯಲು ಸಿಖ್ಖರು ಒತ್ತಾಯ

Pinterest LinkedIn Tumblr


ಬೆಂಗಳೂರು: ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಜೀವನ ಚರಿತ್ರೆ ವೆಬ್ ಸೀರಿಸ್​ಗೆ ಆರಂಭದಲ್ಲೇ ಸಂಕಷ್ಟ ಎದುರಾಗಿದೆ. ಸನ್ನಿಯ ಜೀವನ ಚರಿತ್ರೆ ಬಗ್ಗೆ ಕರೆನ್ಜಿತ್ ಕೌರ್-ದಿ ಅನ್ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್’ ಎನ್ನುವ ಶೀರ್ಷಿಕೆಯಲ್ಲಿ ಬರುತ್ತಿದ್ದು, ಸಿಖ್​ ಸಮುದಾಯದ ಮುಖಂಡರು ‘ಕೌರ್​’ ಎನ್ನುವ ಪದವನ್ನು ಶೀರ್ಷಿಕೆಯಿಂದ ತೆಗೆದು ಹಾಕುವಂತೆ ಆಗ್ರಹಿಸಿದ್ದಾರೆ.

ಕೌರ್​ ಎನ್ನುವ ಪದವನ್ನು ಸಿಖ್ ಧರ್ಮವನ್ನ ಪ್ರತಿನಿಧಿಸುವ ಮಹಿಳೆಯರಿಗೆ ನಾಮಕರಣ ಮಾಡಲಾಗುತ್ತದೆ ಎನ್ನಲಾಗಿದೆ. ಹೀಗಾಗಿ, ಸನ್ನಲಿಯೋನ್​ ಜೀವನ ಚರಿತ್ರೆ ವೆಬ್​ ಸೀರಿಸ್​ಗೆ ಅವರ ನಾಮವನ್ನು ಶೀರ್ಷೆಕೆಯಾಗಿಟ್ಟರೆ ಧರ್ಮಕ್ಕೆ ಅವಮಾನವಾಗುತ್ತದೆ ಎಂದು ಮುಖಂಡರು ಭಾವಿಸಿದ್ದಾರೆ ಎನ್ನುತ್ತಿವೆ ಮೂಲಗಳು.

ಸನ್ನಿ ವೆಬ್​ ಸೀರಿಸ್​ ತೆರೆಗೆ ಸಿದ್ದವಾಗಿದೆ. ಕಿರಿಯ ಹಾಲಿವುಡ್ ನಟಿ ರೈಸಾನಾಜಾನಿಯವರು ಸನ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸನ್ನಿ ಲಿಯೋನ್ ಅವರ ನಿಜ ಹೆಸರಾದ ‘ಕರನ್ಜಿತ್’ ಕೌರ್​ ಎಂಬ ಶೀರ್ಷಿಕೆಯೊಂದಿಗೆ ವೆಬ್ ತಾಣವಾದ ಝೀ5 ನಲ್ಲಿ ಈ ವೆಬ್ ಸೀರಿಸ್ ಮೂಡಿಬರಲಿದೆ.

ಸನ್ನಿ ತನ್ನ ವೈಯಕ್ತಿಕ ಕಾರಣಗಳಿಂದಾಗಿಯೇ 19ನೇ ವಯಸ್ಸಿಗೆ ಪೋರ್ನ್ ಜಗತ್ತಿಗೆ ಕಾಲಿಟ್ಟರು. ಮಾಡೆಲ್ ಆಗಿ ವೃತ್ತಿ ಶುರು ಮಾಡಿದ್ದ ಸನ್ನಿ 41ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, 25 ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ ಎನ್ನಲಾಗಿದೆ. ಓರ್ವ ಮಹಿಳೆ ಈ ನೆಲೆಗಟ್ಟಿನ ಮೇಲೆ ಅವಮಾನಗಳನ್ನು ಸಹಿಸಿ ಸಾಧನೆ ಮೆಟ್ಟಿಲೇರಿರುವುದು ವಿಮರ್ಶಾತ್ಮಕ ಎಂಬ ಚರ್ಚೆಗಳು ನಡೆಯುತ್ತಿವೆ.

Comments are closed.