ರಾಷ್ಟ್ರೀಯ

ಮಕ್ಕಳ ಕಳ್ಳಸಾಗಾಟ ದಂಧೆ: ಮದರ್‌ ಥರೇಸಾರ ಮಿಶನರೀಸ್‌ ಆಫ್‌ ಚಾರಿಟೀಸ್‌ ಮೇಲೆ ಹದ್ದಿನಗಣ್ಣು

Pinterest LinkedIn Tumblr


ದೆಹಲಿ: ನೋಬೆಲ್‌ ಪುರಸ್ಕೃತೆ ಮದರ್‌ ಥರೇಸಾಗೆ ಸಂಬಂಧಪಟ್ಟ ಮಿಶನರೀಸ್ ಆಫ್‌ ಚಾರಿಟಿ ಸೇರಿದಂತೆ, ಮಕ್ಕಳ ಆರೈಕೆ ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಿರುವ ಎಲ್ಲ ಸಂಸ್ಥೆಗಳೂ ಸಂಬಂಧ ಪಟ್ಟ ಪ್ರಾಧಿಕಾರದದೊಂದಿಗೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವೆ ಮನೇಕಾ ಗಾಂಧಿ ಆದೇಶ ಹೊರಡಿಸಿದ್ದಾರೆ.

ಅಲ್ಲದೇ ದೇಶಾದ್ಯಂತ ಮಿಶನರೀಸ್‌ ಆಫ್‌ ಚಾರಿಟಿ ನಡೆಸುತ್ತಿರುವ ಎಲ್ಲ ಮಕ್ಕಳ ಆರೈಕೆ ಸಂಸ್ಥೆಗಳ ಮೇಲೆ ನಿಗಾ ಇಡಲು ಎಲ್ಲ ರಾಜ್ಯ ಸರಕಾರಗಳಿಗೆ ಕೇಂದ್ರ ಸರಕಾರ ಸೂಚನೆ ನೀಡಿದೆ.

ತಿಂಗಲ ಆರಂಭದಲ್ಲಿ, ಜಾರ್ಖಂಡ್‌ನ ರಾಂಚಿಯಲ್ಲಿ ಮಕ್ಕಳ ಕಳ್ಳಸಾಗಾಟದಲ್ಲಿ ಭಾಗಿಯಾಗಿದ್ದ ಮಿಶನರಿಯಿ ಇಬ್ಬರು ದಾದಿಯರನ್ನು ಪೊಲೀಸರು ಬಂಧಿಸಿದ್ದರು. ಮಕ್ಕಳ ಕಳ್ಳಸಾಗಾಟದ ದಂಧೆಯ ಭಾಗವಾಗಿದ್ದ ಇಬ್ಬರು ದಾದಿಯರು ಜಾರ್ಖಂಡ್‌ ಹಾಗು ಉತ್ತರ ಪ್ರದೇಶದಲ್ಲಿ ನಾಲ್ಕು ಹಸುಗೂಸುಗಳನ್ನು ಮಾರಾಟ ಮಾಡಿದ್ದರು.

“ಮಕ್ಕಳ ಆರೈಕೆ ಸಂಸ್ಥೆಗಳನ್ನು ಸಾಕಷ್ಟು ಹಿಂದೆಯೇ ಲಿಂಕ್‌ ಮಾಡಬೇಕಿತ್ತು. ಈ ಸಂಸ್ಥೆಗಳಿಗೆ ಇದೇ ವಿಚಾರವಾಗಿ ಡಿಸೆಂಬರ್‌ 1, 2017ರ ಡೆಡ್‌ಲೈನ್‌ ವಿಧಿಸಲಾಗಿತ್ತು.ಆದರೆ ಈ ಪ್ರಕ್ರಿಯೆಯನ್ನು ತುರ್ತಾಗಿ ಮಾಡಬೇಕಾದ ಅಗತ್ಯವಿದೆ” ಎಂದು ಮನೇಕಾ ತಿಳಿಸಿದ್ದಾರೆ.

ಬಾಲ ನ್ಯಾಯ ಕಾಯಿದೆಗೆ 2015ರಲ್ಲಿ ಮಹತ್ವದ ತಿದ್ದುಪಡಿ ತಂದಿದ್ದ ನರೇಂದ್ರ ಮೋದಿ ಸರಕಾರ, ಈ ಎಲ್ಲ ಮಕ್ಕಳ ಆರೈಕೆ(?) ಕೇಂದ್ರಗಳನ್ನು ನೋಂದಣಿ ಮಾಡಬಾಕಾದ ಕಡ್ಡಾಯತೆಯ ಆದೇಶ ಹೊರಡಿಸಿತ್ತು. ಆದರೆ ದೇಶದ ಕೆಲ ಅನಾಥಾಶ್ರಮಗಳು(?) ಕೇಂದ್ರದ ಈ ನಡೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದ್ದವು.

ಕಳೆದ ಡಿಸೆಂಬರ್‌ನಿಂದ 2300 ಸಂಸ್ಥೆಗಳು ನೋಂದಣಿ ಮಾಡಿಕೊಂಡಿದ್ದು, 4000 ಸಂಸ್ಥೆಗಳು ಇನ್ನೂ ಮೀನಮೇಶ ಎಣಿಸುತ್ತಿದ್ದು ಸಾಕಷ್ಟು ಅನುಮಾನ ಹುಟ್ಟಿಸಿವೆ. ಮಕ್ಕಳ ರಕ್ಷಣೆಯ ರಾಷ್ಟ್ರೀಯ ಸಮಿತಿಯ ಅಂಕಿಅಂಶದ ಪ್ರಕಾರ ದೇಶಾದ್ಯಂತ ನೋಂದಣಿಯಾಗಿರುವ ಸಂಸ್ಥೆಗಳಲ್ಲಿ 2,32,937 ಮಕ್ಕಳಿದ್ದು, ನೋಂದಣಿ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಸಂಸ್ಥೆಗಳ ವ್ಯಥೆ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.

Comments are closed.