ಮನೋರಂಜನೆ

ಸೋಲಾರ್ ಭಾಗ್ಯ; ಮಂಡ್ಯಕ್ಕೂ, ಅಲಿಯಾ ಭಟ್ ಗೂ ಏನು ಸಂಬಂಧ!

Pinterest LinkedIn Tumblr

ಮಂಡ್ಯ: ಬಾಲಿವುಡ್ ನ ಅತ್ಯಂತ ಯಶಸ್ವಿ ನಟಿಯರಲ್ಲಿ ಅಲಿಯಾ ಭಟ್ ಕೂಡಾ ಒಬ್ಬರು. ಬಿಕಿನಿ ಫೋಟೊ ಶೂಟ್, ಡೇಟಿಂಗ್ ಎಂಬ ಸುದ್ದಿಗೆ ಗ್ರಾಸವಾಗುತ್ತಿದ್ದ ಅಲಿಯಾ ಇದೀಗ ಬೆಳಕಿಲ್ಲದ ಹಳ್ಳಿಗಳಿಗೆ ಸೋಲಾರ್ ಮೂಲಕ ದೀಪ ಬೆಳಗಿಸುವ ಯೋಜನೆಯಲ್ಲಿ ಕರ್ನಾಟಕದ ಮಂಡ್ಯದ 40 ಕುಟುಂಬಗಳಿಗೆ ಬೆಳಕಿನ ಭಾಗ್ಯ ನೀಡಿ ಸುದ್ದಿಯಾಗಿದ್ದಾರೆ.

ಮಂಡ್ಯ ಜಿಲ್ಲೆಯ ಕಿಕ್ಕೇರಿ ಗ್ರಾಮದಲ್ಲಿರುವ ಸುಮಾರು 40 ಕುಟುಂಬಗಳಿಗೆ ಬಾಲಿವುಡ್ ನಟಿ ಅಲಿಯಾ ಭಟ್ ಅವರಿಂದಾಗಿ ಬೆಳಕು ಕಾಣುವಂತಾಗಿದೆ. ಈ ವರ್ಷದ ಆರಂಭದಲ್ಲಿ ಸ್ಟೈಲ್ ಕ್ರ್ಯಾಕರ್ ನೈಟ್ ಮಾರ್ಕೆಟ್ ನಲ್ಲಿ ಮಿ ವಾರ್ಡ್ ರೋಬ್ ಇಸ್ ಸೂ ವಾರ್ಡ್ ರೋಬ್ ಎಂಬ ಹೆಸರಿನಲ್ಲಿ ನಡೆದ ಅಭಿಯಾನದ ಕಾರ್ಯಕ್ರಮದಲ್ಲಿ ಅಲಿಯಾ ಭಟ್ ಅವರ ಬಟ್ಟೆಗಳನ್ನು ಅಭಿಮಾನಿಗಳು ಲಕ್ಷಾಂತರ ರೂಪಾಯಿಗೆ ಖರೀದಿಸಿದ್ದರು.

ಇತ್ತೀಚೆಗೆ ಬೆಂಗಳೂರು ಮೂಲದ ಅರೋಹ(ಎಆರ್ ಓಎಚ್ ಎ) ಎಂಬ ಸಂಸ್ಥೆ ಲಿಟರ್ ಆಫ್ ಲೈಟರ್ ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದು ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡಿ ಬಳಿಕ ಅದರಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಿದ್ಯುತ್ ನೀಡಲು ಆ ಹಣವನ್ನು ಉಪಯೋಗಿಸುತ್ತದೆ.

ಬಳಿಕ ಅರೋಹ ಸಂಸ್ಥೆ ಲಿಟರ್ ಆಫ್ ಲೈಟರ್ ಕಾರ್ಯಕ್ರಮದಡಿಯಲ್ಲಿ ಚಾರಿಟಿಗಾಗಿ ಅಲಿಯಾ ಭಟ್ ಅವರನ್ನು ಸಂಪರ್ಕಿಸಿತ್ತು. ಬಳಿಕ ಅಲಿಯಾ ಭಟ್ ಮಾರಾಟಕ್ಕಿಟ್ಟಿದ್ದ ಬಟ್ಟೆಯಿಂದ ಸಂಗ್ರಹವಾಗಿದ್ದ ಹಣವನ್ನು ಈ ಸಂಸ್ಥೆಗೆ ನೀಡಿದ್ದು, ಅವರ ಹಣದಿಂದ ಮಂಡ್ಯದ 40 ಕುಟುಂಬಗಳಿಗೆ ಸೋಲಾರ್ ವಿದ್ಯುತ್ ದೀಪ ನೀಡಿರುವುದಾಗಿ ದ ಹಿಂದೂಸ್ಥಾನ್ ಟೈಮ್ ವರದಿ ಮಾಡಿದೆ.

ಈ ಯೋಜನೆ ಕುರಿತು ಪ್ರತಿಕ್ರಿಯೆ ನೀಡಿರುವ ಅಲಿಯಾ, ಭಾರತದಲ್ಲಿ ಈಗಲೂ ಹಲವು ಹಳ್ಳಿಗಳಲ್ಲಿ ಜನರು ಕತ್ತಲೆಯಲ್ಲೇ ಬದುಕು ಕಳೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಲಿಟರ್ ಅಫ್ ಲೈಟ್ಸ್ ಪರಿಸರ ಸ್ನೇಹಿ ಸೋಲಾರ್ ದೀಪದ ಮೂಲಕ ಮನೆಗಳನ್ನು ಬೆಳಗಿಸುತ್ತಿದ್ದಾರೆ. ಈ ಸಂಸ್ಥೆ ಸ್ಥಳೀಯ ಸಮುದಾಯಗಳ ಜೊತೆ ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯ ಮೆಟಿರಿಯಲ್ಸ್ ಗಳನ್ನು ಉಪಯೋಗಿಸಿ ದೀಪಗಳನ್ನು ಹಾಕುತ್ತಿರುವುದಾಗಿ ಹೇಳಿದರು. ಈ ಯೋಜನೆಯಿಂದ ಕಿಕ್ಕೇರಿಯ ಸುಮಾರು 200 ಮಂದಿ ಮಿ ವಾರ್ಡ್ ರೋಬ್ ಇಸ್ ಸೂ ವಾರ್ಡ್ ರೋಬ್ ಮೂಲಕ ಪ್ರಯೋಜನ ಪಡೆಯಲಿದ್ದಾರೆ. ನಾವು ಇಂತಹ ಹಲವು ಸಂಸ್ಥೆಗಳ ಮೂಲಕ ಕಾರ್ಯನಿರ್ವಹಿಸುವ ಬಗ್ಗೆ ಚಿಂತನೆ ನಡೆಸಿರುವುದಾಗಿ ತಿಳಿಸಿದ್ದಾರೆ.

Comments are closed.