ರಾಷ್ಟ್ರೀಯ

ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ‘ಹಿಂದೂ ತಾಲಿಬಾನಿಗಳು

Pinterest LinkedIn Tumblr


ನವದೆಹಲಿ: ಬಾಬ್ರಿ ಮಸೀದಿಯನ್ನು ಹಿಂದೂ ತಾಲಿಬಾನಿ​ಗಳು ಧ್ವಂಸ ಮಾಡಿದರು ಎಂದು ‘ಕಕ್ಷಿದಾರ’ನ ಪರ ವಕೀಲ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಮುಂದೆ ಇಂದು ವಾದ ಮಂಡಿಸಿದ್ದಾರೆ. ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಡೆದ ವಿಚಾರಣೆಯಲ್ಲಿ ಕಾಣಿಸಿಕೊಂಡಿದ್ದ ವಕೀಲ ರಾಜೀವ್​ ಧವನ್ ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಬುದ್ಧನ ವಿಗ್ರಹವನ್ನು ಧ್ವಂಸಗೊಳಿಸಿದಂತೆಯೇ ಇಲ್ಲಿ ಬಾಬ್ರಿ ಮಸೀದಿಯನ್ನು ಹಿಂದೂ ತಾಲಿಬಾನಿಗಳು ಧ್ವಂಸಗೊಳಿಸಿದರು ಎಂದು ಕಿಡಿಕಾರಿದರು.

​ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಇಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಅಶೋಖ್ ಭೂಷಣ್ ಮತ್ತು ಎಸ್ ಅಬ್ದುಲ್ ನಜೀರ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ವಕೀಲ ರಾಜೀವ್​ ಅವರು ಯಾವುದೇ ಧರ್ಮ ಮತ್ತು ಸಂಸ್ಕೃತಿಯನ್ನು ನಾಶಗೊಳಿಸಲು ಕಾನೂನಲ್ಲಿ ಅವಕಾಶವಿಲ್ಲ. ಮಸೀದಿ, ಮಂದಿರಗಳಂತಹ ಧಾರ್ಮಿಕ ಕಟ್ಟಡಗಳನ್ನು ಧ್ವಂಸಗೊಳಿಸುವಂತೆ ಸಂವಿಧಾನ ಹೇಳಿಲ್ಲ ಎಂದು ನ್ಯಾಯಾಲಯದಲ್ಲಿ ಅಭಿಪ್ರಾಯಪಟ್ಟರು.
ಇನ್ನು ಪ್ರಕರಣದಲ್ಲಿ ಶಿಯಾ ವಕ್ಫ್ ಸಮಿತಿ ಪರ ವಕೀಲ ಹಿಂದೂ ಮತ್ತು ಮುಸ್ಲಿಮರ ನಡುವಿನ ಸಾಮರಸ್ಯವನ್ನು ಕಾಪಾಡಿಕೊಳ್ಳಲು, ನಾವು ವಿವಾದ ಸ್ಥಳದ ಮೂರನೇಯ ಒಂದು ಭಾಗವನ್ನು ನೀಡಲು ಸಿದ್ಧರಿದ್ದೇವೆ ಎಂದು ಹೇಳಿದ್ದರು. ಈ ಬೆನ್ನಲ್ಲೇ ‘ಕಕ್ಷಿದಾರ’ನ ಪರ ವಕೀಲ ರಾಜೀವ್​ ಧವನ್​ ಈ ರೀತಿಯಾಗಿ ವಾದ ಮಂಡಿಸಿದ್ದು, ಸುಪ್ರೀಂಕೋರ್ಟ್​ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ಮುಘಲ್ ಜನರಲ್ ಮಿರ್ ಬಾಕಿ ಎಂಬಾತ ಹದಿನಾರನೇ ಶತಮಾನದಲ್ಲಿ ಬಾಬ್ರಿ ಮಸೀದಿಯನ್ನು ನಿರ್ಮಿಸಿದ್ದರು ಎನ್ನಲಾಗಿದೆ. ಈ ಮಸೀದಿಯನ್ನು ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಮತ್ತಿತರರು ಸಂಚು ಹೂಡಿ ಧ್ವಂಸ ಮಾಡಲು ಪ್ರೇರೇಪಿಸಿದರು ಎಂಬ ಆರೋಪ ಕೇಳಿ ಬಂದಿದೆ.

ರಾಮ ಜನಿಸಿದ ಭೂಮಿಯಲ್ಲಿ ನಿರ್ಮಿಸಲಾಗಿದ್ದ ರಾಮನ ದೇವಸ್ಥಾನವನ್ನು ಕೆಡವಿ ಹದಿನಾರನೇ ಶತಮಾನದಲ್ಲಿ ಮುಘಲರ ದೊರೆ ಬಾಬರ್ ನೇತೃತ್ವದಲ್ಲಿ ಬಾಬ್ರಿ ಮಸೀದಿಯನ್ನು ನಿರ್ಮಿಸಲಾಯಿತು ಎಂಬುದು ಬಿಜೆಪಿಯ ಮೂಲವಾದ. ಈ ವಿಚಾರವನ್ನು ಜನರಲ್ಲಿ ತುಂಬಿ ಅಡ್ವಾಣಿ ಮತ್ತಿತರರು ಸಂಚು ರೂಪಿಸಿ ಮಸೀದಿಯನ್ನು ಕೆಡವಿದರು ಎನ್ನುವುದು ಶಿಯಾ ವಕ್ಫ್ ಸಮಿತಿಯ ವಾದವಾಗಿದೆ.

ಈ ಹಿಂದೆ ಮಾಜಿ ನ್ಯಾಯಮೂರ್ತಿ ಪಿಸಿ ಘೋಸೆ ಮತ್ತು ನ್ಯಾಯಮೂರ್ತಿ ಆರ್ ಎಫ್ ನಾರಿಮನ್ ಅವರ ನೇತೃತ್ವದ ವಿಭಾಗೀಯ ಪೀಠ, ಅಲಹಾಬಾದ್ ಹೈಕೋರ್ಟಿನ ತೀರ್ಪನ್ನು ತಳ್ಳಿಹಾಕಿತ್ತು. ಬಳಿಕ ವಿಚಾರಣೆ ನಡೆಸಲು ಅನುಮತಿ ನೀಡದೆ, ಪ್ರಕರಣದಲ್ಲಿ ಕೋರ್ಟ್ ಕೆಲವು ನಿರ್ದೇಶನಗಳನ್ನು ನೀಡಿತ್ತು ಎನ್ನಲಾಗಿದೆ.
ಬಳಿಕ ಈ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಮರು ಜೀವ ನೀಡಿದ್ದು, ಎಲ್ ಕೆ ಅಡ್ವಾಣಿ, ಉಮಾ ಭಾರತಿ, ಕಲ್ಯಾಣ್ ಸಿಂಗ್, ಮುರಳಿ ಮನೋಹರ್ ಮುಂತಾದ 13 ನಾಯಕರ ವಿರುದ್ಧ ವಿಚಾರಣೆಯನ್ನು ನಡೆಸಬೇಕೆಂದು ಸುಪ್ರೀಂ ಆಜ್ಞೆ ನೀಡಿತು. 25 ವರ್ಷಗಳ ಹಿಂದೆ ಕೆಡವಿದ ಮಸೀದಿ ಕೇಸ್​ ಈಗಲೂ ಮುಂದುವರೆಯುತ್ತಿದೆ.

Comments are closed.