ರಾಷ್ಟ್ರೀಯ

ಜಯಲಲಿತಾ ಇದ್ದ ಅಪೋಲೋ ಆಸ್ಪತ್ರೆ ಕೋಣೆ ಜು.29ರಂದು ತಪಾಸಣೆ

Pinterest LinkedIn Tumblr


ಚೆನ್ನೈ : ಎಐಡಿಎಂಕೆ ಪರಮೋಚ್ಚ ನಾಯಕಿ ದಿವಂಗತ ಜಯಲಲಿತಾ ಅವರನ್ನು 2016ರ ಡಿಸೆಂಬರ್‌ನಲ್ಲಿ ಚಿಕಿತ್ಸೆಗಾಗಿ ಸೇರಿಸಲಾಗಿದ್ದ ಆಪೋಲೋ ಆಸ್ಪತ್ರೆಯ ಕೋಣೆಯನ್ನು ಇದೇ ಜು.29ರಂದು ತಪಾಸಣೆ ಮಾಡಲಾಗುವುದು.

ಜಯಲಲಿತಾ ಅವರ ಸಾವಿನ ಕುರಿತಾಗಿ ತನಿಖೆಗೆ ನಡೆಸುತ್ತಿರುವ ಏಕ ಸದಸ್ಯ ಆಯೋಗವನ್ನು ಮತ್ತು ವಿ ಕೆ ಶಶಿಕಲಾ ಅವರನ್ನು ಪ್ರತಿನಿಧಿಸುವ ವಕೀಲರು ಅಪೋಲೋ ಆಸ್ಪತ್ರೆಯಲ್ಲಿ ಜಯಲಲಿತಾ ಇದ್ದ ಕೋಣೆಯ ತಪಾಸಣೆ ನಡೆಸುವರು.

ತನಿಖಾ ಮಂಡಳಿಯನ್ನು ಪ್ರತಿನಿಧಿಸುತ್ತಿರುವ ಇಬ್ಬರು ವಕೀಲರು ಮತ್ತು ವಿ ಕೆ ಶಶಿಕಲಾ ಅವರನ್ನು ಪ್ರತಿನಿಧಿಸುತ್ತಿರುವ ಇಬ್ಬರು ವಕೀಲರು ಆಸ್ಪತ್ರೆ ಕೊಠಡಿ ಪ್ರವೇಶಕ್ಕೆ ಅನುಮತಿ ಕೋರಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಏಕ ಸದಸ್ಯ ಆಯೋಗದ ಮುಖ್ಯಸ್ಥರಾಗಿರುವ ಜಸ್ಟಿಸ್‌ ಆರ್ಮುಗಸ್ವಾಮಿ ಅವರು ಅನುಮತಿ ನೀಡಿದರು.

Comments are closed.