ಮನೋರಂಜನೆ

ರಜನೀಕಾಂತ್‌ ಪತ್ನಿ ವಿರುದ್ಧ ವಿಚಾರಣೆಗೆ ಸುಪ್ರೀಂ ಆದೇಶ

Pinterest LinkedIn Tumblr

ಚೆನ್ನೈ : ಸೂಪರ್‌ ಸ್ಟಾರ್‌ ರಜನೀಕಾಂತ್‌ ಅವರ ಪತ್ನಿ ಲತಾ ರಜನೀಕಾಂತ್‌ ಅವರನ್ನು ವಂಚನೆ ಆರೋಪಕ್ಕೆ ಸಂಬಂಧಿಸಿ ವಿಚಾರಣೆಗೆ ಗುರಿಪಡಿಸಲು ಸರ್ವೋಚ್ಚ ನ್ಯಾಯಾಲಯ ಇಂದು ಮಂಗಳವಾರ ಆದೇಶಿಸಿದೆ.

ರಜನೀಕಾಂತ್‌ ಪತ್ನಿ ಲತಾ ಅವರು ಜಾಹೀರಾತು ಸಂಸ್ಥೆಯೊಂದಕ್ಕೆ 6.20 ಕೋಟಿ ರೂ. ಬಾಕಿ ಇರಿಸಿಕೊಂಡಿದ್ದಾರೆ ಎನ್ನಲಾಗಿದ್ದು ಆ ಪ್ರಕರಣದಲ್ಲಿ ಲತಾ ಅವರ ವಿರುದ್ಧ ತನಿಖೆ ನಡೆಯಲಿದೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ರಂಜನ್‌ ಗೊಗೋಯಿ ನೇತೃತ್ವದ ಪೀಠ, ಲತಾ ಅವರ ತನಿಖೆಗೆ ಆದೇಶಿಸಿದೆ.

ಇದಕ್ಕೂ ಮೊದಲು ಕರ್ನಾಟಕ ಹೈಕೋರ್ಟ್‌ ಈ ಪ್ರಕರಣದಲ್ಲಿ ಲತಾ ವಿರುದ್ಧದ ವಿಚಾರಣೆಗೆ ತಡೆ ನೀಡಿತ್ತು. ಇದು ಹಣ ವಂಚನೆ ಪ್ರಕರಣ ಅಲ್ಲ; ಬದಲು ಒಪ್ಪಂದದ ಉಲ್ಲಂಘನೆ ಮಾತ್ರವೇ ಆಗಿದೆ ಎಂದು ಹೈಕೋರ್ಟ್‌ ಹೇಳಿತ್ತು.

ಆ ಬಳಿಕ ಈ ವಿವಾದ ಸುಪ್ರೀಂ ಮೆಟ್ಟಲೇರಿತ್ತು. ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಸದ್ಯ ಸವೋಚ್ಚ ನ್ಯಾಯಾಲಯ ರದ್ದು ಮಾಡಿದೆ.

Comments are closed.