ರಾಷ್ಟ್ರೀಯ

ರಾಮನಿಗೆ ಅವಮಾನ: ಕಾಥಿ ಮಹೇಶ್ 6 ತಿಂಗಳ ಕಾಲ ಹೈದರಾಬಾದ್‌ನಿಂದ ಬ್ಯಾನ್

Pinterest LinkedIn Tumblr


ಹೈದರಾಬಾದ್: ವಿವಾದಾತ್ಮಕ ತೆಲುಗು ಚಿತ್ರ ವಿಮರ್ಶಕ ಕಾಥಿ ಮಹೇಶ್‌ನನ್ನು 6 ತಿಂಗಳ ಕಾಲ ಹೈದರಾಬಾದ್‌ನಿಂದ ಬ್ಯಾನ್ ಮಾಡಲಾಗಿದೆ. ರಾಮನ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಹಿನ್ನೆಲೆ ತೆಲಂಗಾಣ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಅಲ್ಲದೆ, ತೆಲುಗು ಚಿತ್ರ ವಿಮರ್ಶಕ ಕಾಥಿ ಮಹೇಶ್‌ ಹೇಳಿಕೆಯಿಂದ ಕಾನೂನು ಸುವ್ಯವಸ್ಥೆ ತೊಂದರೆಯಾಗಬಹುದೆಂದು ತೆಲಂಗಾಣ ರಾಜಧಾನಿ ಹೈದರಾಬಾದ್‌ನಿಂದ ಅವರ ತವರು ಜಿಲ್ಲೆ ಚಿತ್ತೂರಿಗೆ ಅವರನ್ನು ಗಡೀಪಾರು ಮಾಡಲು ತೆಲಂಗಾಣ ಪೊಲೀಸರು ನಿರ್ಧರಿಸಿದ್ದಾರೆ. ಮಹೇಶ್‌ರನ್ನು ಬಂಧಿಸಿದರೂ ಕೂಡ ಅವರಿಗೆ ಜಾಮೀನು ದೊರಕುವ ಸಾಧ್ಯತೆ ಇದೆ. ಹೀಗಾಗಿ ಬಲಪಂಥೀಯ ಸಂಘಟನೆಗಳು ಈ ವಿಚಾರವಾಗಿ ಈಗಾಗ್ಲೇ ಗಲಾಟೆ ನಡೆಸುತ್ತಿದ್ದು, ಮತ್ತಷ್ಟು ಕಾನೂನು ಸುವ್ಯವಸ್ಥೆ ಹದಗೆಡಬಹುದೆಂದು ಕಾಥಿಯನ್ನು ನೆರೆಯ ಆಂಧ್ರ ಪ್ರದೇಶಕ್ಕೆ ಕಳಿಸಲಿದೆ ಎನ್ನಲಾಗ್ತಿದೆ.

ಆದರೆ, ಆಂಧ್ರ ಪ್ರದೇಶದಲ್ಲೂ ಅವರಿಗೆ ಸ್ವಾಗತ ಸಿಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿದ ಆಂಧ್ರ ಪ್ರದೇಶ ಡಿಜಿಪಿ ಆರ್‌.ಪಿ.ಠಾಕೂರ್, ತೆಲಂಗಾಣ ಪೊಲೀಸರು ಇಲ್ಲಿಗೆ ಕಳಿಸುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಒಂದು ವೇಳೆ ಇದು ನಿಜವಾದರೆ, ಕಾಥಿ ಮಹೇಶ್‌ನನ್ನು ನೆರೆಯ ರಾಜ್ಯವೊಂದಕ್ಕೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎಂದು ಹೇಳಿಕೊಂಡಿದ್ದಾರೆ.

Comments are closed.