ಮನೋರಂಜನೆ

ಕನ್ನಡದ ಹಾಸ್ಯ ನಟ ವಠಾರ ಮಲ್ಲೇಶ್ ನಿಧನ

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್ ವುಡ್ ನ ಹಾಸ್ಯ ನಟ ವಠಾರ ಮಲ್ಲೇಶ್ (42) ಶುಕ್ರವಾರ ನಿಧನರಾಗಿದ್ದಾರೆ. ಅನೇಕ ದಿನಗಳಿಂದ ಕಿಡ್ನಿ ವೈಫಲ್ಯ, ಬ್ರೇನ್​ಸ್ಟ್ರೋಕ್​​ನಿಂದ ಬಳಲುತಿದ್ದ ಮಲ್ಲೇಶ್ ಬೆಂಗಳೂರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

ಇಂದು ಬೆಳಿಗ್ಗೆ ಬನ್ನೇರುಘಟ್ಟದ ಜಂಗಲಪಾಳ್ಯದ ತಮ್ಮ ನಿವಾಸದಲ್ಲಿ ಅವರು ನಿಧನರಾದರು. 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಮಲ್ಲೇಶ್ ದರ್ಶನ್ ತೂಗುದೀಪ ಅವರ ಅಭಿಮಾನಿಯಾಗಿದ್ದರು.

ಮೂಲತಃಅ ಕೃಷಿಕ ಕುಟುಂಬದ ಹಿನ್ನೆಲೆಯಿಂದ ಬಂದಿದ್ದ ಮಲ್ಲೇಶ್ ಟೆಲಿಫೋನ್ ಬೂತ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು,ನಾಟಕ, ಸಿನಿಮಾರಂಗದಲ್ಲಿ ಆಸಕ್ತಿ ಇದ್ದ ಇವರಿಗೆ ಕಿರಿತೆರೆಯ ಜನಪ್ರಿಯ ಧಾರಾವಾಹಿ ’ವಠಾರ’ ನಿರ್ಮಾಪಕ ಮಂಜುನಾಥ್ ಧಾರಾವಾಹಿಯಲ್ಲಿ ನಟಿಸಲು ಅವಕಾಶ ನೀಡಿದ್ದರು. ಅಲ್ಲಿಂದ ಅವರ ಕಿರುತೆರೆ ನಟನ ಜೀವನ ಪ್ರಾರಂಭವಾಗಿ ಸುಮಾರು 60ಕ್ಕೂ ಅಧಿಕ ಧಾರಾವಾಹಿ, 250ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದರು.

ಮೋಹನ್ ಜುನೇಜಾ ಅವರ ಮೂಲಕ ಚಲನಚಿತ್ರ ರಂಗ ಪಾದಾರ್ಪೊಅಣೆ ಮಾಡಿದ ಮಲ್ಲೇಶ್ `ಸುಂಟರಗಾಳಿ’, `ದತ್ತ’, ಅಭಯ್, `ಅಜಯ್’, `ಚಾರ್‍ಮಿನಾರ್’, `ಚಡ್ಡಿದೋಸ್ತ್’ ಇನ್ನೂ ಮುಂತಾದ ಚಿತ್ರಗಳಲ್ಲಿ ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡಿದ್ದರು.

Comments are closed.