ಮನೋರಂಜನೆ

ನಾಯಕ ನಟನೊಬ್ಬ ನನ್ನನ್ನು ಮಂಚಕ್ಕೆ ಕರೆದಿದ್ದ: ಮಲ್ಲಿಕಾ ಶೆರಾವತ್

Pinterest LinkedIn Tumblr


ಮುಂಬೈ: ನಿರ್ದೇಶಕರೊಬ್ಬರು ನನ್ನನ್ನು ಕೋಣೆಗೆ ಕರೆದಿದ್ದರು ಎಂದು ನಟಿ ಮಲ್ಲಿಕ ಶೆರಾವತ್ ಅವರು ಬಾಲಿವುಡ್‌ನಲ್ಲಿರುವ ಕಾಸ್ಟಿಂಗ್ ಕೌಚ್ ಬಗ್ಗೆ ರಹಸ್ಯ ಬಯಲು ಮಾಡಿದ್ದಾರೆ.

ದಶಕದ ಹಿಂದಿನ ಬಾಲಿವುಡ್‌ನಲ್ಲಿ ಮರ್ಡರ್ ಚಿತ್ರದ ಮೂಲಕ ಪ್ರಸಿದ್ಧಿ ಪಡೆದಿದ್ದ ಮಲ್ಲಿಕಾ ಶೆರಾವತ್ ಕಾಸ್ಟಿಂಗ್ ಕೌಚ್ ಬಗ್ಗೆ ಹೊಸ ವಿವಾದದ ಬಾಂಬ್ ಸಿಡಿಸಿದ್ದಾರೆ. ಕಾಸ್ಟಿಂಗ್ ಕೌಚ್ ವಿರೋಧಿಸಿದ ಸಲುವಾಗಿಯೇ ತಾನು ಅನೇಕ ಸಿನಿಮಾಗಳಿಂದ ಅವಕಾಶ ವಂಚಿತಳಾಗಬೇಕಾಯಿತು ಎಂದು ಮಲ್ಲಿಕಾ ಬಾಲಿವುಡ್ ರಹಸ್ಯ ಬಯಲಿಗೆಳೆದಿದ್ದಾರೆ.

ಮರ್ಡರ್ ಸಿನಿಮಾದ ನಂತರದಲ್ಲಿ ಮಲ್ಲಿಕಾಗೆ ಹೆಚ್ಚೆಚ್ಚು ಸಿನಿಮಾಗಳ ಅವಕಾಶ ಸಿಕ್ಕಿತ್ತು. ಹೀಗೆ ಸಿನಿಮಾದ ಚಿತ್ರೀಕರಣವೊಂದರ ಸಂದರ್ಭದಲ್ಲಿ ಸಹನಟನೊಂದಿಗೆ ತೆರೆಯ ಮೇಲೆ ಇಂಟಿಮೇಟ್ ದೃಶ್ಯಗಳು ಅಂದ್ರೆ ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ನಟಿಸಬೇಕಿತ್ತು. ಚತ್ರೀಕರಣ ಮುಗಿದ ಮೇಲೂ ಆ ನಟ ಮಲ್ಲಿಕಾರನ್ನ ತನ್ನ ಕೋಣೆಗೆ ಕರೆದನಂತೆ. ಅದಕ್ಕೆ ಒಲ್ಲೆ ಅಂದ ಕಾರಣಕ್ಕೆ ಮಲ್ಲಿಕಾ ಚಿತ್ರರಂಗದಿಂದ ಅವಕಾಶ ವಂಚಿತಳಾದೆ ಅಂತ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ನಿರ್ದೇಶಕರು ಕೂಡ ಬೆಳಗಿನ ಜಾವ ಮೂರು ಗಂಟೆಗೆ ನನ್ನ ಕೋಣೆಗೆ ಬಾ ಅಂತ ಮಲ್ಲಿಕಾಗೆ ಆಹ್ವಾನ ನೀಡಿದ್ದರಂತೆ. ಇಂತದ್ದಕ್ಕೆಲ್ಲಾ ನಾನು ಒಪ್ಪಿಕೊಳ್ಳಲಿಲ್ಲ. ಆಫ್ ಸ್ಕ್ರೀನ್ ರೊಮ್ಯಾನ್ಸ್ ಗೆ ಕಾಂಪ್ರಮೈಸ್ ಆಗಲಿಲ್ಲ. ಈ ವಿಚಾರಗಳನ್ನ ಮಾತನಾಡೋಕೆ ನನಗೆ ಈ ಕ್ಷಣದಲ್ಲೂ ಭಯವಾಗ್ತಿದೆ ಅಂತ ಹೇಳಿದ್ದಾರೆ ಮಲ್ಲಿಕಾ.

ಕಾಂಪ್ರಮೈಸ್ ಆಗದ ಹಿನ್ನಲೆಯಲ್ಲೇ ನನ್ನನ್ನ ಚಿತ್ರರಂಗದಿಂದಲೇ ದೂರ ಇಡುವ ಪ್ರಯತ್ನಗಳು ನಡೀತು ಅಂತ ಹೊಸ ಬಾಂಬ್ ಸಿಡಿಸಿದ್ದಾರೆ ಮಲ್ಲಿಕಾ ಶೆರಾವತ್. ಮಲ್ಲಿಕಾಳ ಈ ಹೇಳಿಕೆ ಬಾಲಿವುಡ್‌ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುವ ಸಾಧ್ಯತೆಗಳು ದಟ್ಟವಾಗಿದೆ.

Comments are closed.