ಮನೋರಂಜನೆ

ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆಗೆ ಚಿಕಿತ್ಸೆ

Pinterest LinkedIn Tumblr

ನವದೆಹಲಿ: ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಹೈಗ್ರೇಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

ಹೆಚ್ಚಿನ ಮಟ್ಟದ ಕ್ಯಾನ್ಸರ್ ನಿಂದ ಬಳಲುತ್ತಿರುವ ಸೋನಾಲಿ ಅದಕ್ಕಾಗಿ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ನೀವು ಕೆಲವೊಮ್ಮೆ ಕಡಿಮೆ ಮಟ್ಟದ್ದನ್ನು ನಿರೀಕ್ಷಿಸಿದಾಗ ಜೀವನ ನಿಮಗೆ ಕರ್ವ್ ಬಾಲ್ ಎಸೆಯುತ್ತದೆ, ನಾನು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ, ಕ್ಯಾನ್ಸರ್ ಬರುವುದನ್ನು ನಾನು ನಿರೀಕ್ಷಿಸಿರಲಿಲ್ಲ, ಕೆಲ ನೋವುಗಳಿಂದ ಪರೀಕ್ಷೆ ಮಾಡಿಸಿದಾಗ ಅನಿರೀಕ್ಷಿತ ವಿಷಯ ಗೊತ್ತಾಯಿತು, ನನ್ನ ಕುಟುಂಬ ಹಾಗೂ ಆಪ್ತ ಸ್ನೇಹಿತರು ನನ್ನ ಜೊತೆಗೂಡಿದರು, ನನಗೆ ಉತ್ತಮ ಆತ್ಮ ವಿಶ್ವಾಸ ನೀಡಿ ಉತ್ತಮ ಚಿಕಿತ್ಸೆ ಕೊಡಿಸಿದರು, ಅವರಿಗೆ ನಾನು ಯಾವಾಗಲೂ ಋಣಿಯಾಗಿರುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ಹೋಗಲಾಡಿಲು ಬೇರೆ ದಾರಿಯಿಲ್ಲ, ಕೂಡಲೇ ಚಿಕಿತ್ಸೆ ಪಡೆಯುವುದೊಂದೇ ಮಾರ್ಗ, ನಾನು ನ್ಯೂಯಾರ್ಕ್ ನಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದೇನೆ, ನಾವು ಆಶಾವಾದಿಯಾಗಿದ್ದುಕೊಂಡು ಪ್ರತಿ ಹಂತದಲ್ಲೂ ದೃಡ ಸಂಕಲ್ಪ ಮಾಡಿ ಹೋರಾಟ ನಡೆಸಬೇಕು, ಕಳೆದ ಕೆಲ ದಿನಗಳಿಂದ ನಾನು ಅಪರಿಮಿತ ಪ್ರೀತಿ ಹಾಗಬ ಬೆಂಬಲ ಪಡೆಯುತ್ತಿದ್ದೇನೆ, ನಾನು ನಿಜವಾಗಿಯೂ ಅದಕ್ಕೆ ಗ್ರೇಟ್ ಫುಲ್ ಆಗಿದ್ದೇನೆ, ಇದರ ವಿರುದ್ಧ ನಾನು ಹೋರಾಡುತ್ತೇನೆ, ನನ್ನ ಕುಟುಂಬಸ್ಥರು ಹಾಗೂ ನನ್ನ ಆಪ್ತ ಸ್ನೇಹಿತರು ನನ್ನ ಬೆನ್ನ ಹಿಂದೆ ಇರುವುದೇ ನನಗೆ ಬಲ ತಂದಿದೆ ಎಂದು ಬರೆದುಕೊಂಡಿದ್ದಾರೆ.

Comments are closed.