
ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಚಿತ್ರರಂಗದಲ್ಲಿ ತಾವು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಇದೇ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ.
ಈವನಿಂಗ್ ಸ್ಯಾಂಡರ್ಡ್‌ಗೆ ನೀಡಿದ ಸಂದರ್ಶನದ ವೇಳೆ ಮೀ ಟೂ ಹಾಗೂ ಟೈಮ್ಸ್ ಅಪ್ ಅಭಿಯಾನದ ಕುರಿತ ಪ್ರಶ್ನೆಗೆ ಉತ್ತರಿಸಿದ ದೀಪಿಕಾ, ನಾನು ವೃತ್ತಿ ಜೀವನದ ಆರಂಭದಲ್ಲಿ ಸಾಕಷ್ಟುಒತ್ತಡಗಳನ್ನು ಎದುರಿಸಿದ್ದೆ.
ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಸ್ತನದ ಗಾತ್ರವನ್ನು ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಲಾಗಿತ್ತು. ಬಾಲಿವುಡ್ ನಿರ್ದೇಶಕರು ಮತ್ತು ನಿರ್ಮಾಪಕರು ಗುರುತಿಸಬೇಕಾದರೆ ಹೀಗೆಲ್ಲಾ ಮಾಡುವುದು ಅನಿವಾರ್ಯ ಎಂಬ ಭಾವನೆಯನ್ನು ಆಗ ನನ್ನಲ್ಲಿ ಬಿತ್ತಲಾಗಿತ್ತು.
ಚಿತ್ರರಂಗ ಪ್ರವೇಶಿಸಲು ಇದು ಸುಲಭದ ವಿಧಾನವೂ ಆಗಿತ್ತು. ಆದರೆ, ಅಂತಹ ವ್ಯಕ್ತಿ ಅಲ್ಲ. ನನ್ನ ತನವನ್ನು ಯಾವಾಗಲೂ ಕಾಪಾಡಿಕೊಂಡು ಬಂದಿದ್ದೇನೆ ಎಂದು ದೀಪಿಕಾ ಪಡುಕೋಣೆ ಹೇಳಿಕೊಂಡಿದ್ದಾರೆ.
Comments are closed.