ರಾಷ್ಟ್ರೀಯ

ಹತ್ತು ವರ್ಷದ ನಂತರ ತಾಯಿಯಾದವಳಿಗೆ ಹುಟ್ಟಿದ ಮಕ್ಕಳು ಎಷ್ಟು ಗೊತ್ತಾ?

Pinterest LinkedIn Tumblr


ರಾಜ್ಕೋಟ್: ಪ್ರನಾಳ ಶಿಶು ವಿಧಾನದಿಂದ ಗರ್ಭ ಧರಿಸಿದ್ದ ಮಹಿಳೆಯೊಬ್ಬರು ಚತುರ್ವಳಿಗಳಿಗೆ ಜನ್ಮ ನೀಡಿದ ಅಪರೂಪದ ಪ್ರಸಂಗ ಕಚ್‌ನಲ್ಲಿ ಬೆಳಕಿಗೆ ಬಂದಿದೆ.

ದೀಪಕ್ ಭಾನುಶಾಲಿ ಮತ್ತು ಕೃಷ್ಣಾ ಭಾನುಶಾಲಿ ದಂಪತಿಗೆ ಕಳೆದ 10 ವರ್ಷಗಳಿಂದ ಮಕ್ಕಳಿರಲಿಲ್ಲ. ಹೀಗಾಗಿ ಅವರು ಪ್ರನಾಳ ಶಿಶು ವಿಧಾನದ ಮೊರೆ ಹೋಗಿದ್ದರು. ಕಳೆದ ಸೋಮವಾರ ಕೃಷ್ಣಾ ತಾಯಿಯಾಗಿದ್ದಾರೆ. 10 ವರ್ಷಗಳಷ್ಟು ದೀರ್ಘಕಾಲದಿಂದ ತಂದೆಯಾಗಲು ಕಾತರಿಸುತ್ತಿದ್ದ ಪತಿಗೆ ಒಂದಲ್ಲ, ಎರಡಲ್ಲ ನಾಲ್ಕು ಮಕ್ಕಳ ಉಡುಗೊರೆ ನೀಡಿದ್ದಾರೆ.

ಗಾಂಧಿಧಾಮದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಹುಟ್ಟಿರುವ ಚತುರ್ವಳಿಗಳಲ್ಲಿ ತಲಾ ಎರಡು ಗಂಡು- ಹೆಣ್ಣು ಮಕ್ಕಳಿವೆ . ಇವು 1ರಿಂದ 1.25 ಕೆಜಿಯಷ್ಟು ತೂಗುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಸಹಜ ಹೆರಿಗೆಯಾಗಿದ್ದು ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ. ವೈದ್ಯಕೀಯ ಕಾರಣಗಳಿಗಾಗಿ ಶಿಶುಗಳನ್ನು ಇನ್ಕ್ಯುಬೇಟರ್‌ನಲ್ಲಿರಸಲಾಗಿದೆ.

ಚತುರ್ವಳಿ ಜನನ ಅಪರೂಪದ ಪ್ರಕ್ರಿಯೆಯಾಗಿದ್ದು 20 ಲಕ್ಷ ಡೆಲಿವರಿಗೆ 1 ಸಲ ಚತುರ್ವಳಿ ಜನಿಸುತ್ತವೆ, ಎಂದು ಹೆರಿಗೆ ಮಾಡಿಸಿದ ಡಾಕ್ಟರ್ ನರೇಶ್ ಭಾನುಶಾಲಿ ಹೇಳಿದ್ದಾರೆ.

Comments are closed.