ಮನೋರಂಜನೆ

ಸ್ಯಾಂಡಲ್‍ವುಡ್‍ನ ಬಹು ಬೇಡಿಕೆ ನಟ ದರ್ಶನ್ ಅಭಿನಯದ “ಯಜಮಾನ’ನಿಗೆ ಟ್ವೀಟ್ ಮಾಡಿದ ಸಿಂಗಂ ವಿಲನ್

Pinterest LinkedIn Tumblr

ಸ್ಯಾಂಡಲ್‍ವುಡ್‍ನ ಬಹು ಬೇಡಿಕೆ ನಟ ದರ್ಶನ್ ಅಭಿನಯದ “ಯಜಮಾನ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಕ್ಲೈಮ್ಯಾಕ್ಸ್ ಫೈಟಿಂಗ್ ಶೂಟಿಂಗ್ ಶುರುವಾಗಿದೆ. ದರ್ಶನ್ ಎದುರಿಗೆ ನಟ ಥಾಕೂರ್ ಅನೂಪ್ ಸಿಂಗ್ ಅಭಿನಯ ಮಾಡುತ್ತಿದ್ದು, ಈ ಬಗ್ಗೆ ಅನೂಪ್ ಸಿಂಗ್ ತಮ್ಮ ಟ್ವಿಟ್ಟರ್ ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

“ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಯಲ್ಲಿ ಅಭಿನಯ ಮಾಡುತ್ತಿರುವುದು ಬಹು ದೊಡ್ಡ ಖುಷಿಯ ವಿಚಾರ. ಹಾರ್ಡ್ ವರ್ಕ್ ಮಾಡಿರುವುದರ ಪ್ರತಿಫಲ ಇಂದು ಚಿತ್ರೀಕರಣದ ಸಮಯದಲ್ಲಿ ಕಾಣುತ್ತಿದೆ’ ಎಂದು ನಟ ಥಾಕೂರ್ ಅನೂಪ್ ಸಿಂಗ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಇದಲ್ಲದೇ ಥಾಕೂರ್ ಅನೂಪ್ ಸಿಂಗ್ ಈ ಹಿಂದೆ ಪುರಿ ಜಗನ್ನಾಥ್ ನಿರ್ದೇಶನದ “ರೋಗ್’ ಎಂಬ ಕನ್ನಡ ಚಿತ್ರದಲ್ಲಿ ವಿಭಿನ್ನ ವಿಲನ್ ಪಾತ್ರದಲ್ಲಿ ನಟಿಸಿದ್ದು, ಆ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆ ಕೂಡಾ ವ್ಯಕ್ತವಾಗಿತ್ತು. ಅಲ್ಲದೇ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರ “ಉದ್ಘರ್ಷ’ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

ಇನ್ನು “ಯಜಮಾನ’ ಚಿತ್ರವನ್ನು ಬಿ.ಸುರೇಶ್‌ ಹಾಗೂ ಶೈಲಜಾ ನಾಗ್‌ ನಿರ್ಮಿಸುತ್ತಿದ್ದು, ಪಿ.ಕುಮಾರ್‌ ಈ ಸಿನಿಮಾದ ನಿರ್ದೇಶಕರು. ಚಿತ್ರದಲ್ಲಿ ದರ್ಶನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ,”ಬಹದ್ದೂರ್‌’ ಚೇತನ್‌ ಸಂಭಾಷಣೆ, ಶ್ರೀಶ ಕೂದುವಳ್ಳಿ ಛಾಯಾಗ್ರಹಣವಿದೆ. ಚಿತ್ರದಲ್ಲಿ ರವಿಶಂಕರ್‌, ದೇವರಾಜ್‌, ಧನಂಜಯ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.

Comments are closed.