ರಾಷ್ಟ್ರೀಯ

ಅತ್ಯಾಚಾರ ಆರೋಪಿ ಸ್ವಯಂಘೋಷಿತ ದೇವಮಾನವ ಬಾಬಾ ಪರಾರಿ; ಆಶ್ರಮದಲ್ಲಿದ್ದ 600 ಬಾಲಕಿಯರೂ ನಾಪತ್ತೆ

Pinterest LinkedIn Tumblr

ಜೈಪುರ : 25 ವರ್ಷ ಪ್ರಾಯದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ದಾಟಿ ಮಹಾರಾಜ್‌ನ ರಾಜಸ್ಥಾನದ ಅಲಾವಾಸ್‌ನ ಆಶ್ರಮದಿಂದ 600 ಮಂದಿ ಬಾಲಕಿಯರು ನಾಪತ್ತೆಯಾಗಿರುವ ಬಗ್ಗೆ ತಿಳಿದು ಬಂದಿದೆ.

ಆಶ್ರಮದಲ್ಲಿ ಮಹಿಳೆಯರು ಸೇರಿ 700 ಮಂದಿ ಬಾಲಕಿಯರು ಇದ್ದು ಆಪೈಕಿ ಈಗ ನೂರು ಮಂದಿ ಮಾತ್ರ ಇದ್ದಾರೆ.ದಾಟಿ ಮಹಾರಾಜ್‌ ಕೂಡ ನಾಪತ್ತೆಯಾಗಿದ್ದಾನೆ.

ರೇಪ್‌ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದಾಟಿ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಬಾಲಕಿಯರು ರಜೆಯ ಮೇಲೆ ಮನೆಗೆ ತೆರಳಿದ್ದಾರೋ ಇಲ್ಲ ಬೇರೆ ಕಡೆಗೆ ಕರೆದೊಯ್ಯಲಾಗಿದೆಯೋ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

ಆಶ್ರಮದಲ್ಲಿದ್ದ 25 ರ ಮಹಿಳೆ ತಪ್ಪಿಸಿಕವಂಡು ತನ್ನ ಮೇಲೆ ಬಾಬಾ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ದಾಖಲಿಸಿದ್ದರು.

Comments are closed.