ಮನೋರಂಜನೆ

ಹೆರಿಗೆ ಸಮಯದಲ್ಲಿ ಗರ್ಭೀಣಿಗೆ ರಕ್ತದಾನ ಮಾಡಿ ಮೂರು ಜೀವ ಉಳಿಸಿದ ನಟಿ ಹರಿಪ್ರಿಯಾ!

Pinterest LinkedIn Tumblr

ತುರ್ತು ಪರಿಸ್ಥಿತಿಯಲ್ಲಿದ್ದ ಗರ್ಭೀಣಿಗೆ ರಕ್ತದಾನ ಮಾಡುವ ಮೂಲಕ ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ಮಾನವೀಯತೆ ಮೆರೆದಿದ್ದಾರೆ.

ಹೆರಿಗೆ ಸಮಯದಲ್ಲಿ ರಕ್ತದ ಕೊರತೆಯಿಂದ ನರಳುತ್ತಿದ್ದ ಗರ್ಭೀಣಿಗೆ ಹರಿಪ್ರಿಯಾ ರಕ್ತದಾನ ಮಾಡಿದ್ದು ಆ ಮೂಲಕ ಗರ್ಭಿಣಿ ಮಹಿಳೆ ಸೇರಿ ಇಬ್ಬರು ಅವಳಿ ಮಕ್ಕಳ ಜೀವ ಉಳಿಯುವಲ್ಲಿ ಪ್ರಮುಖ ಪಾತ್ರವಹಿಸಿದರು.

ರಕ್ತ ಬೇಕಾಗಿದೆ ಎನ್ನುವ ಟ್ವೀಟ್ ನೋಡಿದ ತಕ್ಷಣ ಹರಿಪ್ರಿಯಾ ಆಸ್ಪತ್ರೆಗೆ ದಾವಿಸಿದ್ದರು. ತಮ್ಮ ಸಹಾಯವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ಇಂದು ಸಾರ್ಥಕತೆಯ ಮನೋಭಾವ ಮೂಡಿದೆ. ಆ ಪುಟ್ಟ ಮಕ್ಕಳನ್ನು ನೋಡಿ ಖುಷಿಯಾಗಿದೆ. ರಕ್ತದಾನ ಮಾಡುವಂತೆ ಎಲ್ಲರಿಗೂ ಪ್ರೋತ್ಸಾಹ ನೀಡಿ. ಅದರಿಂದ ಒಂದು ಜೀವ ಉಳಿಸಬಹುದು ಎಂದು ಬರೆದುಕೊಂಡಿದ್ದಾರೆ.

Comments are closed.