ಮನೋರಂಜನೆ

ಕರ್ನಾಟಕದಲ್ಲಿ ಕಾಳ ಚಿತ್ರ ಬಿಡುಗಡೆಯ ಕುರಿತು ನಟ ರಜನಿಕಾಂತ್ ಹೇಳಿದ್ದೇನು..?

Pinterest LinkedIn Tumblr

ಚೆನ್ನೈ: ಕರ್ನಾಟಕದಲ್ಲಿ ಕಾಳ ಚಿತ್ರಕ್ಕೆ ಯಾವುದೇ ಅಡ್ಡಿಯುಂಟಾಗಬಹುದು ಎಂದು ನನಗೆ ಅನಿಸುವುದಿಲ್ಲ ಎಂದು ಚಿತ್ರದ ನಾಯಕ ನಟ ರಜನಿಕಾಂತ್ ಹೇಳಿದ್ದಾರೆ.

ಕರ್ನಾಟಕದಲ್ಲಿ ತಮಿಳು ಮಾತನಾಡುವ ಮಾತ್ರವಲ್ಲದೆ ಬೇರೆ ಭಾಷೆಗಳ ಜನರು ಕೂಡ ಸಿನಿಮಾ ನೋಡಲು ಇಚ್ಛಿಸುತ್ತಾರೆ. ಹೀಗಿರುವಾಗ ಕರ್ನಾಟಕ ಸರ್ಕಾರ ಚಿತ್ರ ಪ್ರದರ್ಶನ ಮಾಡುವ ಥಿಯೇಟರ್ ಗಳು ಮತ್ತು ಸಿನಿಮಾ ನೋಡುವ ವೀಕ್ಷಕರಿಗೆ ಸೂಕ್ತ ರಕ್ಷಣೆಯನ್ನು ನೀಡುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.

ರಜನಿಕಾಂತ್ ಅಭಿನಯದ ಕಾಳ ಚಿತ್ರ ನಾಳೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ರಜನಿಕಾಂತ್ ಅವರು ಇತ್ತೀಚೆಗೆ ಕಾವೇರಿ ನೀರು ಹಂಚಿಕೆ ಕುರಿತು ನೀಡಿರುವ ಹೇಳಿಕೆಯನ್ನು ಖಂಡಿಸಿ ಕರ್ನಾಟಕದಲ್ಲಿ ಅವರ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬಾರದೆಂದು ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಸಿದ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾಳ ಬಿಡುಗಡೆಗೆ ನಿರ್ಬಂಧ ಹಾಕಿದೆ.

Comments are closed.