ಕರಾವಳಿ

ಮಂಗಳೂರಿನ ಜನತೆಗೆ ಕೃತಜ್ಞನಾಗಿದ್ದೇನೆ : ಖ್ಯಾತ ಕ್ರಿಕೆಟ್ ಆಟಗಾರ ಕೆ.ಎಲ್.ರಾಹುಲ್

Pinterest LinkedIn Tumblr

ಮಂಗಳೂರು, ಜೂನ್.05: ಭಾರತದ ಖ್ಯಾತ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಮಂಗಳೂರು ಮೂಲದ ಕೆ.ಎಲ್.ರಾಹುಲ್ ಅವರನ್ನು ಎಸ್‍ಬಿಐ ಮಂಗಳೂರು ಸೆಂಟರ್ ವತಿಯಿಂದ ಸೋಮವಾರ ನಗರದ ಓಶಿಯನ್ ಪರ್ಲ್ಸ್ ಸಭಾಂಗಣದಲ್ಲಿ ಸಮ್ಮಾನಿಸಲಾಯಿತು.

ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಅವರು, ನನ್ನ ಕ್ರಿಕೆಟ್ ಜೀವನ ಆರಂಭವಾದದ್ದು ಮಂಗಳೂರಿನಲ್ಲೇ., ಇಲ್ಲಿರುವಾಗಲೇ ನಾನು 15ಕ್ಕಿಂತ ಕಿರಿಯರ ಕರ್ನಾಟಕ ತಂಡದ ನಾಯಕನಾಗಿದ್ದೆ. ಮಂಗಳೂರಿನ ಜನತೆಗೆ ನಾನು ಕೃತಜ್ಞನಾಗಿದ್ದೇನೆ.ಟೀಮ್ ಇಂಡಿಯಾದಲ್ಲಿ ದೊರೆತಿರುವ ಅವಕಾಶಗಳನ್ನು ಬದ್ದತೆಯಿಂದ ನಿರ್ವಹಿಸುತ್ತೇನೆ ಎಂದು ರಾಹುಲ್ ಹೇಳಿದರು.

ಸ್ಥಳದಲ್ಲೇ ರಾಹುಲ್ ಕಲಾಕೃತಿ ರಚಿಸಿದ ಶಬರಿ ಗಾಣಿಗ:

ಭಾರತ ತಂಡದ ಖ್ಯಾತ ಕ್ರಿಕೆಟ್ ಆಟಗಾರ ಕೆ.ಎಲ್.ರಾಹುಲ್ ಅವರು ಸೋಮವಾರ ಎಸ್‌ಬಿಐ ವತಿಯಿಂದ ಏರ್ಪಡಿಸಲಾದ ಸಮ್ಮಾನ ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರ ಕಲಾವಿದೆ ಶಬರಿ ಗಾಣಿಗ ಅವರು ರಾಹುಲ್ ಅವರ ಚಿತ್ರವನ್ನು ಸ್ಥಳದಲ್ಲೇ ರಚಿಸಿದರು.

ಬಳಿಕ ಶಬರಿ ಗಾಣಿಗ ಸ್ಥಳದಲ್ಲೇ ರಚಿಸಿದ ರಾಹುಲ್ ಕಲಾಕೃತಿಯನ್ನು ಕೆ.ಎಲ್ ರಾಹುಲ್ ಅವರಿಗೆ ವಿಶೇಷ ಕೊಡುಗೆಯಾಗಿ ನೀಡಲಾಯಿತು. ಈ ವೇಳೆ ಕಲಾವಿದೆಯನ್ನು ರಾಹುಲ್ ಅಭಿನಂದಿಸಿದರು. ಇದೇ ಸಂದರ್ಭ ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳು ರಾಹುಲ್ ಜೊತೆ ಸೆಲ್ಫಿ ತೆಗೆಸಿಕೊಂಡರು.

Comments are closed.