ಮನೋರಂಜನೆ

ನನ್‌ ಯಕ್ಡಾನೂ ಮುಖ್ಯಮಂತ್ರಿ ಮನೆಗೆ ಬರುವುದಿಲ್ಲ: ಹುಚ್ಚ ವೆಂಕಟ್‌

Pinterest LinkedIn Tumblr


ಬೆಂಗಳೂರು: ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಾಗುವ ನಟ ಹುಚ್ಚ ವೆಂಕಟ್‌ ಬುಧವಾರ ರೈತರ ಸಾಲ ಮನ್ನಾ ಕುರಿತು ಚರ್ಚಿಸಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಜೆ.ಪಿ.ನಗರದ ನಿವಾಸಕ್ಕೆ ಆಗಮಿಸಿ, ಭೇಟಿ ಸಾಧ್ಯವಾಗದೆ ನಿರಾಶರಾಗಿ ಕಿಡಿ ಕಾರಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಮನೆ ಬಳಿ ಬಂದ ವೆಂಕಟ್‌ಗೆ ಭದ್ರತಾ ಸಿಬಂದಿಗಳು ಭೇಟಿ ನಿರಾಕರಿಸಿದ್ದು, ಅವರು ಹೊರಗೆ ಕೆಲ ಹೊತ್ತು ಕಾಯಬೇಕಾಯಿತು. ಮುಖ್ಯಮಂತ್ರಿಗಳ ಪಿಎ ಸಹಿತ ಭೇಟಿಗೆ ಸಿಗಲಿಲ್ಲ.

ನನ್‌ ಯಕ್ಡಾ …!

ಭೇಟಿ ಸಾಧ್ಯವಾಗದಾಗ ಕಿಡಿ ಕಾರಿದ ಹುಚ್ಚ ವೆಂಕಟ್‌ ‘ನನ್‌ ಯಕ್ಡಾ…ನಾನು ಸಿಎಂ ಜೊತೆ ಮಾತಾಡಲು ಬಂದ್ರೆ ಅವರ ಪಿಎನೂ ಸಿಗ್ತಾ ಇಲ್ಲಾ…ಸಮಾಜದ ಪರ ಇರುವ ನನಗೇ ಸಿಗ್ತಾ ಇಲ್ಲಾ ಅಂದ್ರೆ ಇನ್ನು ಜನಸಾಮಾನ್ಯರಿಗೆ ಈ ಸಿಎಂ ಸಿಕ್ತಾರಾ.. ನನಗೆ ಪ್ರೀತಿ ಮುಖ್ಯ ..ನನ್‌ ಯಕ್ಡಾ ಕೂಡಾ ಇನ್ನು ಈ ಕಡೆ ಬರಲ್ಲಾ’ ಎಂದರು.

ನನಗೆ ಪಿಎಂ,ಸಿಎಂ ಯಾರೂ ಕೂಡ ದೊಡ್ಡವರಲ್ಲ.ನನಗೆ ಜನ ಮುಖ್ಯ. ಪಿಎಂ ಅವರೇ ನನ್ನ ಮನೆಗೆ ಬರ್ಬೇಕ್‌..ನಾನು ದುರಾಹಂಕಾರದಿಂದ ಹೇಳ್ತಾ ಇಲ್ಲ. ಇದು ಹುಚ್ಚ ವೆಂಕಟ್‌ ಸ್ಟೈಲ್‌ ಎಂದರು.

ಸಾಲ ಮನ್ನಾ ಮಾಡ್ಬೇಕ್‌..!
ಕುಮಾರಸ್ವಾಮಿ ಅವರು ಹೇಳಿದಂತೆ ರೈತರ ಸಾಲ ಮನ್ನಾ ಮಾಡ್ಲೇ ಬೇಕು ಎಂದರು. ಮಾಡಕೇ ಆಗಿಲ್ಲಾ ಅಂದ್ರೇ..ಯಾಕ್ರೀ ಘೋಷಣೆ ಮಾಡ್ತೀರಾ.. ಎಂದರು.

Comments are closed.