ರಾಷ್ಟ್ರೀಯ

ಬಿಜೆಪಿ ಶಾಸಕನಿಂದ ಯುವತಿಗೆ ಮದುವೆಯ ಭರವಸೆ ನೀಡಿ, ಅತ್ಯಾಚಾರ

Pinterest LinkedIn Tumblr


ಬರೇಲಿ: ಉನ್ನಾವೋನಲ್ಲಿ ಯುವತಿ ಮೇಲೆ ಬಿಜೆಪಿ ಮುಖಂಡ ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಇದೀಗ ಇಂಥದ್ದೇ ಮತ್ತೊಂದು ಪ್ರಕರಣವೂ ಬೆಳಕಿಗೆ ಬಂದಿದೆ. ಇಲ್ಲಿಯೂ ಬಿಜೆಪಿ ಶಾಸಕನೊಬ್ಬ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಆರೋಪದಲ್ಲಿ ಸಿಕ್ಕಿ ಬಿದ್ದಿದ್ದಾನೆ.

ಉತ್ತರ ಪ್ರದೇಶದ ಬರೇಲಿಯ ಬರಯೂನ್ ಬಿಜೆಪಿ ಶಾಸಕ ಕುಶಾಗ್ರ ಸಾಗರ್ ಸಿಕ್ಕಿಬಿದ್ದ ಆರೋಪಿ. ಮನೆ ಕೆಲಸದವಳನ್ನು ಮದುವೆಯಾಗುವುದಾಗಿ ವಂಚಿಸಿದ ಶಾಸಕ, ಕಳೆದೆರಡು ವರ್ಷಗಳಿಂದಲೂ ನಿರಂತರವಾಗಿ ಆಕೆ ಮೇಲೆ ಅತ್ಯಾಚಾರವೆಸಗುತ್ತಿದ್ದಾನೆ.

ಇದೀಗ ಕುಶಾಗ್ರ ಸಾಗರ್‌ಗೆ ಮದುವೆ ನಿಶ್ಚಯವಾಗಿದ್ದು, ಜೂನ್ 17ರಂದು ಬೇರೆ ಮಹಿಳೆಯೊಂದಿಗೆ ಸಪ್ತಪದಿ ತುಳಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. ಅಲ್ಲದೇ ನನಗೆ ನ್ಯಾಯ ದೊರಕದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾರೆ.

ಇದೀಗ ಈ ಸಂಬಂಧ ಪ್ರಕರಣ ದಾಖಲು ಮಾಡಿದ್ದಕ್ಕೆ ಅನೇಕರಿಂದ ಬೆದರಿಕೆ ಕರೆಗಳು ಬರುತ್ತಿವೆ, ಎಂದು ಆಕೆ ತಿಳಿಸಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.