ಮನೋರಂಜನೆ

ಇಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ ಅನಂತ್‌ನಾಗ್‌ -ರಾಧಿಕಾ ಚೇತನ್‌ ಅಭಿನಯದ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ

Pinterest LinkedIn Tumblr

ಬೆಂಗಳೂರು: ಬಹುನಿರೀಕ್ಷಿತ, ಬಹಳಷ್ಟು ಕುತೂಹಲ ಕೆರಳಿಸಿರುವಂಥ ಕಥಾಹಂದರವನ್ನು ಹೊಂದಿರುವ ಕನ್ನಡದ ಹಿರಿಯ ನಟ ಅನಂತ್‌ನಾಗ್‌ ಮತ್ತು ರಾಧಿಕಾ ಚೇತನ್‌ ಅಭಿನಯದ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ ಶುಕ್ರವಾರ ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ.

ಸಿನೆಮಾವನ್ನು ಕಲರ್ಸ್ ಆಫ್ ಆನೇಕಲ್ ಹೆಸರಿನಲ್ಲಿ ಸುದರ್ಶನ್, ರಾಮಮೂರ್ತಿ ಹಾಗು ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ, ಗಾಯಕರು ಆಗಿರುವ ಹರೀಶ್ ಶೇರಿಗಾರ್ ಅವರ ಆಕ್ಮೇ ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರ್ನಡಿಯಲ್ಲಿ ನಿರ್ಮಿಸಲಾಗಿದೆ.

ಕನ್ನಡ ಚಿತ್ರರಂಗದಲ್ಲಿ ಈ ವರೆಗೂ ಯಾರು ಮಾಡದಂಥ ವಿಭಿನ್ನ ಕಥಾ ಹಂದರವಾನ್ನಿ ಇಟ್ಟುಕೊಂಡು ನರೇಂದ್ರ ಬಾಬು ನಿರ್ದೇಶಿಸಿರುವ ಈ ಚಿತ್ರ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಹೊಸ ಮೈಲುಗಲ್ಲನ್ನು ಸೃಷ್ಟಿಸುವ ಸಾಧ್ಯತೆ ಇದೆ.

ಶೀರ್ಷಿಗೆಯಿಂದ ಗಮನಸೆಳೆಯುವ ಸಿನಿಮಾ ಕಮರ್ಷಿಯಲ್ ಆಧಾರಿತ ಚಿತ್ರ. ಎರಡು ಜನರೇಶನ್ ನ ವಿಭಿನ್ನ ವೃತ್ತಿಪರರ ಕುರಿತು ಸಿನಿಮಾವಿದು. ಒಬ್ಬ ಹಿರಿಯ ವ್ಯಕ್ತಿಯ ಸುತ್ತ ಕಥೆ ಸುತ್ತುತ್ತದೆ. ಇನ್ನೊಂದು ಐಟಿ ವೃತ್ತಿಪರರ ಅವರ ಜೀವನ ಶೈಲಿಯನ್ನು ಇಲ್ಲಿ ಕಥೆಯ ರೂಪಕ್ಕೆ ತರಲಾಗಿದೆ. ಚಿತ್ರದಲ್ಲಿ ರಾಧಿಕಾ ಅನಂತ್ ನಾಗ್ ಅವರಿಗೆ ಬಾಸ್ ಆಗಿ ನಟಿಸಿದ್ದಾರೆ. ಈ ಚಿತ್ರವನ್ನು ಖುದ್ದು ಅನಂತ್ ನಾಗ್ ಅವರೇ ಮೆಚ್ಚಿ, ಟೈಟಲ್ ನೀಡಿರುವುದು ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲವನ್ನು ಕೆರಳಿಸಿದೆ.

ಒಂದು ವಿಶಿಷ್ಟ ಕಥಾ ಹಂದರ ಹೊಂದಿರುವ ಈ ಚಿತ್ರದ ಕೆಲವು ಸನ್ನಿವೇಶಗಳನ್ನು ದುಬೈನ ಬುರ್ಜ್ ಖಲೀಫಾ ಕಟ್ಟಡದಲ್ಲಿ ಸೆರೆ ಹಿಡಿಯಲಾಗಿದೆ. ಈ ಕಟ್ಟದಲ್ಲಿ ಚಿತ್ರೀಕರಣ ನಡೆಸಿದ ಮೊದಲ ಕನ್ನಡ ಚಿತ್ರ ಎನ್ನುವ ಹೆಮ್ಮೆ ಈ ಚಿತ್ರಕ್ಕಿದೆ.

ಈ ಚಿತ್ರಕ್ಕೆ ನಿರ್ದೇಶಕ ನರೇಂದ್ರ ಬಾಬು ಅವರ ಕಥೆ, ಚಿತ್ರಕಥೆ, ಸಂಭಾಷಣೆ, ಗೀತ ಸಾಹಿತ್ಯವಿದೆ. ರಂಗಭೂಮಿ ಹಿನ್ನೆಲೆಯ ರಾಮಚಂದ್ರ ಹಡಪದ್ ಅವರು ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ವಿಜಯ ಪ್ರಕಾಶ್, ಅರ್ಮಾನ್ ಮಲ್ಲಿಕ್, ವರ್ಷ, ವಾಣಿ ಸತೀಶ್, ಶ್ವೇತ ಪ್ರಭು ಹಾಡುಗಳಿಗೆ ಧ್ವನಿಯಾಗಿದ್ದಾರೆ. ವಿನಾಯಕರಾಮ್ ಕಲಗಾರು, ನರೇಂದ್ರ ಬಾಬು ಸಾಹಿತ್ಯ ಬರೆದಿದ್ದಾರೆ.

Comments are closed.