ಮನೋರಂಜನೆ

ಪಾತ್ರಕ್ಕಾಗಿ ಮಂಚದ ಕುರಿತು ಬಾಲಿವುಡ್ ನಟಿ ಆಲಿಯಾ ಭಟ್ ಹೇಳುವುದೇನು?

Pinterest LinkedIn Tumblr


ಕಾಸ್ಟಿಂಗ್ ಕೌಚ್ ಬಗ್ಗೆ ಈಗ ಎಲ್ಲೆಡೆ ಚರ್ಚೆ ಬಿಸಿಬಿಸಿ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಬಾಲಿವುಡ್ ಬೆಡಗಿ ಆಲಿಯಾ ಭಟ್ ಸಹ ತುಟಿ ಬಿಚ್ಚಿದ್ದಾರೆ. ಕಾಸ್ಟಿಂಗ್ ಕೌಚ್ ಒಮ್ಮೆಲೆ ಗಮನಾರ್ಹ ಅಂಶವಾಗಿ ಬದಲಾಗಿದೆ ಈ ರೀತಿಯ ವಿಷಯಗಳು ಚರ್ಚೆಗೆ ಬಂದ ಕೂಡಲೆ ವಾತಾವರಣವೆಲ್ಲಾ ಪ್ರತಿಕೂಲವಾಗಿ ಬದಲಾಗುತ್ತದೆ ಎಂದಿದ್ದಾರೆ.

ಚಿತ್ರೋದ್ಯಮದ ಬಗ್ಗೆ ಜನ ಕೆಟ್ಟದಾಗಿ ಮಾತನಾಡಲು ಆರಂಭಿಸಿದ್ದಾರೆ. ಕಾಸ್ಟಿಂಗ್ ಕೌಚ್ ಸಮಸ್ಯೆ ತನಗೆ ಯಾವಾಗಲೂ ಎದುರಾಗಲಿಲ್ಲ. ಆದರೆ ಅವಕಾಶಕ್ಕಾಗಿ ಯುವಕ ಯುವತಿಯರು ಚಿತ್ರೋದ್ಯಮದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾ ಮುಂದೆ ಸಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಬಲಹೀನತೆಯನ್ನು ಲಾಭ ಮಾಡಿಕೊಳ್ಳಲು ಕೆಲವರು ಪ್ರಯತ್ನಿಸುತ್ತಿದ್ದಾರೆಂದು ಆಲಿಯಾ ಭಟ್ ಹೇಳಿದ್ದಾರೆ.

ಕಾಸ್ಟಿಂಗ್ ಕೌಚ್ ಜಗತ್ತಿನಾದ್ಯಂತ ಇದ್ದು ಇದನ್ನು ಎದುರಿಸಲು ನಟಿನಟರು ತಮ್ಮ ಮೇಲೆ ತಾವು ವಿಶ್ವಾಸ ಇಡಬೇಕು. ಇಂತಹ ಪರಿಸ್ಥಿತಿ ಎದುರಾರದೆ ಕೂಡಲೆ ತಂದೆತಾಯಿಗೆ ಮಾಹಿತಿ ನೀಡುವುದರ ಜತೆಗೆ ಪೊಲೀಸರಿಗೂ ದೂರು ನೀಡಬೇಕು ಎಂದು ಸೂಚಿಸಿದ್ದಾರೆ ಆಲಿಯಾ.

Comments are closed.