ಮನೋರಂಜನೆ

ನನಗೆ ಮದುವೆ ವಯಸ್ಸು ಬಂದು ಬಿಟ್ಟಿದೆ, ನಿನಗಾಗಿ ಎದುರು ನೋಡುತ್ತಿದ್ದೇನೆ ಎಂದ ನಯನತಾರಾನ ಪ್ರಿಯತಮ

Pinterest LinkedIn Tumblr


ತಮಿಳು ನಿರ್ದೇಶಕ ವಿಘ್ನೇಶ್ ಶಿವನ್, ಹೀರೋಯಿನ್ ನಯನತಾರಾ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿಕೊಳ್ಳುತ್ತಿರುವುದು ಗೊತ್ತೇ ಇದೆ. ಇತ್ತೀಚೆಗೆ ಇವರಿಬ್ಬರೂ ವಿಹಾರಯಾತ್ರೆ ನಿಮಿತ್ತ ಅಮೆರಿಕಾಗೆ ಹಾರಿದ್ದರು. ಅಲ್ಲಿನ ಫೋಟೋಗಳನ್ನು ವಿಘ್ನೇಶ್ ಪೋಸ್ಟ್ ಮಾಡುತ್ತಾ ನಯನತಾರಾ ಜತೆಗೆ ಎಂಜಾಯ್ ಮಾಡಿದ್ದಾರೆ ಹೇಳಿದ್ದರು.

ನಯನತಾರಾ ಸಹ ಕಾರ್ಯಕ್ರಮವೊಂದರಲ್ಲಿ ವಿಘ್ನೇಶ್‌ರನ್ನು ’ಭಾವಿ ಪತಿ’ ಎಂದು ಕರೆಯುವ ಮೂಲಕ ಇವರಿಬ್ಬರು ಪ್ರೀತಿಸಿಕೊಳ್ಳುತ್ತಿರುವ ಸುದ್ದಿ ಜಗಜ್ಜಾಹೀರಾಯಿತು. ಇದೀಗ ವಿಗ್ನೇಶ್ ಶಿವನ್ ಸಾಮಾಜಿಕ ಮಾಧ್ಯಮದಲ್ಲಿ ಹಾಕಿರುವ ಪೋಸ್ಟ್ ಶೀಘ್ರದಲ್ಲೇ ಇವರಿಬ್ಬರೂ ಹಸೆಮಣೇ ಏರಲಿರುವ ಸೂಚನೆ ನೀಡಿದೆ.

ನಯನ್, ವಿಘ್ನೇಶ್‍ ಕಪ್ಪು ಟೋಪಿ ಹಾಕಿಕೊಂಡಿರುವ ಫೋಟೋಗಳನ್ನು ವಿಘ್ನೇಶ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, “ನನಗೆ ಮದುವೆ ವಯಸ್ಸು ಬಂದು ಬಿಟ್ಟಿದೆ. ನಿನಗಾಗಿ ಎದುರು ನೋಡುತ್ತಿದ್ದೇನೆ” ಎಂದು ತಮಿಳಿನಲಿ ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಪದಗಳು ನಯನ್ ನಟಿಸುತ್ತಿರುವ ಸಿನಿಮಾ ಒಂದರ ಹಾಡಿನಲ್ಲಿ ಬಳಸಿರುವಂತಹದ್ದು.
ನಯನತಾರಾ, ವಿಘ್ನೇಶ್ ಶಿವನ್
’ಕೊಲಮಾವು ಕೋಕಿಲ’ ಎಂಬ ತಮಿಳು ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರಲ್ಲಿ ಕಲ್ಯಾಣ ವಯಸ್ಸು ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಈ ಹಾಡಿನ ಲಿರಿಕ್ಸ್ ಪೋಸ್ಟ್ ಮಾಡುತ್ತಾ ವಿಘ್ನೇಶ್ ಮೇಲಿನಂತೆ ಪೋಸ್ಟ್ ಮಾಡಿದ್ದಾರೆ. ಇವರ ವರಸೆ ನೋಡಿದರೆ ಶೀಘ್ರದಲ್ಲೇ ಗಟ್ಟಿಮೇಳ ಮೊಳಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

Comments are closed.