ಕರ್ನಾಟಕ

ನಮ್ಮ ಜೊತೆ ಕಾಂಗ್ರೆಸ್‌ನ ಎಂಟು ಶಾಸಕರು ಇದ್ದಾರೆ: ಸಂಸದೆ ಶೋಭಾ ಕರಂದ್ಲಾಜೆ

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್‌ನ 8 ಶಾಸಕರು ಬಿಜೆಪಿ ಜತೆ ಇದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ನಾಳೆಯೇ ಬಹುಮತ ಸಾಬೀತು ಪಡಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು, ಬದಲಾವಣೆ ಬಯಸಿ ಮತ ಚಲಾಯಿಸಿರುವ 6 ಕೋಟಿ ಕನ್ನಡಿಗರ ಆಶೀರ್ವಾದ ಬಿಜೆಪಿ ಮೇಲಿದೆ. ಮತದಾರರ ಆಶೀರ್ವಾದವನ್ನು ಗೌರವಿಸುವುದಾಗಿ ಟ್ವೀಟ್ ಮಾಡಿದ್ದಾರೆ.

ಶುಕ್ರವಾರದ ಬೆಳವಣಿಗೆಗಳ ಕ್ಷಣ ಕ್ಷಣದ ಮಾಹಿತಿ.

ಸರಕಾರ ರಚನೆ ಬಿಕ್ಕಟ್ಟು ಆರಂಭವಾದಾಗಿನಿಂದ ಇಬ್ಬರು ಕಾಂಗ್ರೆಸ್‌ ಶಾಸಕರು ನಾಪತ್ತೆಯಾಗಿದ್ದಾರೆ ಎಂಬ ವದಂತಿ ಹರಡಿದೆ. ಇದರಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಆತಂಕಕ್ಕೆ ಒಳಗಾಗಿವೆ.

ಬಳ್ಳಾರಿಯ ವಿಜಯನಗರದ ಶಾಸಕ ಆನಂದ್‌ ಸಿಂಗ್‌ ಯಾವ ಕಡೆ ಇದ್ದಾರೆ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಅವರು ಕಾಂಗ್ರೆಸ್‌ ನಾಯಕ ಡಿ.ಕೆ ಶಿವಕುಮಾರ್‌ ಸಂಪರ್ಕದಲ್ಲಿದ್ದಾರೆ. ಬೇಷರತ್ ಬೆಂಬಲದ ಪತ್ರವನ್ನೂ ನೀಡಿದ್ದಾರೆ ಎಂದು ಆರಂಭದಲ್ಲಿ ಹೇಳಲಾಗಿತ್ತಾದರೂ ಬಳಿಕ ಸಂಪರ್ಕ ಕಡಿದುಹೋಗಿದೆ ಎನ್ನಲಾಗುತ್ತಿದೆ.

Comments are closed.