ಮನೋರಂಜನೆ

ಆನಂದ್ ಬೆಡ್ ರೂಮ್‍ಗೆ ಹೋಗುವ ಮೊದಲು ಒಂದು ಷರತ್ತು ಹಾಕಿದ್ದಾರೆ: ಸೋನಂ ಕಪೂರ್

Pinterest LinkedIn Tumblr


ಮುಂಬೈ: ಬಾಲಿವುಡ್ ಬೆಡಗಿ ಸೋನಂ ಕಪೂರ್ ತನ್ನ ಗೆಳೆಯ ಆನಂದ್ ಅಹುಜಾ ಜೊತೆ ಮಂಗಳವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋನಂ ಬಾಂದ್ರಾದಲ್ಲಿರುವ ತನ್ನ ಆಂಟಿಯ ಬಂಗಲೆಯಲ್ಲಿ ಸಿಖ್ ಸಂಪ್ರದಾಯದಂತೆ ಆನಂದ್ ಅಹುಜಾ ಅವರನ್ನು ಮಂಗಳವಾರ ಬೆಳಗ್ಗೆ ಮದುವೆಯಾಗಿದ್ದಾರೆ.

ಮಂಗಳವಾರ ಇಬ್ಬರ ಮದುವೆ ನಡೆದಿದ್ದರೂ ಭಾವಿ ಪತ್ನಿಗೆ ಮದುವೆಗೂ ಮೊದಲೇ ಆನಂದ್ ಷರತ್ತು ವಿಧಿಸಿದ್ದಾರೆ.

ಹೌದು, ಇತ್ತೀಚೆಗೆ ನಡೆದ ಒಂದು ಕಾರ್ಯಕ್ರಮದ ಸಂದರ್ಶನದಲ್ಲಿ ಮಾತನಾಡಿದ ಸೋನಂ, ಆನಂದ್ ಬೆಡ್ ರೂಮ್‍ಗೆ ಹೋಗುವ ಮೊದಲು ಒಂದು ಷರತ್ತು ಹಾಕಿದ್ದಾರೆ. ಏನೇ ಆದರೂ ಆ ಷರತ್ತು ಪಾಲಿಸಬೇಕೆಂದು ಹೇಳಿದ್ದಾರೆ ಎಂದು ತಿಳಿಸಿದ್ದರು.

ಬೆಡ್ ರೂಮ್‍ಗೆ ಹೋಗುವ ಮೊದಲು ಎಂದರೆ ಮಲಗಲು ಹೋಗುವಾಗ ನಾವಿಬ್ಬರು ಮೊಬೈಲ್ ಬಳಸಬಾರದು ಎಂದು ಷರತ್ತು ಹಾಕಿದ್ದಾರೆ. ರೂಮಿನಲ್ಲಿ ಮಲಗಲು ಹೋಗುವಾಗ ಆನಂದ್‍ಗೆ ನಾವಿಬ್ಬರೇ ಇರುವುದು ಇಷ್ಟ. ನಮ್ಮ ಮಧ್ಯೆ ಮೊಬೈಲ್ ಇರುವುದು ಅವರಿಗೆ ಇಷ್ಟವಿಲ್ಲ ಎಂದು ಸೋನಂ ಹೇಳಿದ್ದಾರೆ.

ನಾನು ಪ್ರತಿ ದಿನವೂ ತಮ್ಮ ಸ್ಟೇಟಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿರುತ್ತೇನೆ. ಈಗ ಪತಿ ಹೇಳಿದ ಷರತ್ತನ್ನು ಪಾಲಿಸುವುದು ನನಗೆ ಸ್ವಲ್ಪ ಕಷ್ಟವಾದರೂ ಪಾಲಿಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ಎಲ್ಲ ದಂಪತಿಗಳು ನಾವು ಅಳವಡಿಸಿಕೊಂಡಿರುವ ಈ ನಿಯಮ ಪಾಲಿಸಿ ಎಂದು ಸೋನಂ ಸಲಹೆ ಕೂಡ ನೀಡಿದ್ದಾರೆ.

ಮದುವೆಯಾಗಿರುವ ಸೋನಂ ಕ್ಯಾನೆ ಫಿಲ್ಮ್ ಫೆಸ್ಟಿವಲ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗಾಗಿ ಅಕ್ಟೋಬರ್ ವರೆಗೂ ಸೋನಂ ಹಾಗೂ ಆನಂದ್ ಅವರಿಗೆ ಹನಿಮೂನ್‍ಗೆ ಹೋಗಲು ಸಮಯವಲ್ಲ ಎಂದು ವರದಿಯಾಗಿದೆ.

ಆನಂದ್ ತನ್ನ ಪತ್ನಿ ಸೋನಂ ಜೊತೆ ಕ್ಯಾನೆ ಫಿಲ್ಮಂ ಫೆಸ್ಟಿವಲ್‍ನಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಹಾಗೆಯೇ ಸೋನಂ ಅಕ್ಟೋಬರ್‍ವರೆಗೂ ಬ್ಯುಸಿಯಿದ್ದು, ಈ ಜೋಡಿ ತಮ್ಮ ಹನಿಮೂನ್‍ಗೆ ನವೆಂಬರ್ ನಲ್ಲಿ ಹೋಗುತ್ತಾರೆ ಎಂದು ವರದಿಯಾಗಿದೆ.

Comments are closed.