
ಬಾಲಿವುಡ್ ನಟಿ ರವೀನಾ ಟಂಡನ್ ಈಗ ಯಾವುದೇ ಸಿನಿಮಾಗಳಲ್ಲಿ ತೊಡಗಿಕೊಳ್ಳದಿದ್ದರೂ ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲವಾಗಿದ್ದಾರೆ. ಅವರ ಕೆಲವು ಹೇಳಿಕೆಗಳು, ಟ್ವೀಟ್‌ಗಳು ಆಗಾಗ ಚರ್ಚೆಗೂ ಗ್ರಾಸವಾಗುತ್ತಿರುತ್ತವೆ. ಒಮ್ಮೊಮ್ಮೆ ಟ್ರೋಲ್‌ಗೂ ಗುರಿಯಾಗಿದ್ದುಂಟು. ಇದೀಗ ಮತ್ತೊಮ್ಮೆ ಟ್ರೋಲ್‌ಗೆ ಒಳಗಾಗಿದ್ದಾರೆ ರವೀನಾ.
ಬೆಕ್ಕಿನ ಫೋಟೋವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು ರವೀನಾ. ಆ ಬೆಕ್ಕಿಗೆ ಚಿನ್ನದ ಒಡವೆ ಎಲ್ಲಾ ಹಾಕಿ ಸಿಂಗರಿಸಲಾಗಿತ್ತು. ಇದೆಲ್ಲಾ ಸಾಲದು ಎಂಬಂತೆ ಅದರ ಹಣೆಗೆ ಸ್ಟಿಕ್ಕರ್ ಸಹ ಇಡಲಾಗಿತ್ತು. ಸ್ಕಾರ್ಪ್ ಒಂದನ್ನು ಸುತ್ತಿ ಮದುಮಗಳ ತರಹ ಅಲಂಕಾರ ಮಾಡಿದ್ದರು. ಈ ಫೋಟೋ ಜತೆಗೆ “ಈ ಅದೃಷ್ಟಶಾಲಿ ಬೆಕ್ಕು ಯಾರದು ಊಹಿಸಿ?” ಎಂದು ಹಾಕಿದ್ದರು.
ಬಹುಶಃ ಎಲ್ಲರೂ ಅಂಬಾನಿ ಅವರದು ಇರಬೇಕು ಎಂದು ಟ್ವೀಟ್ ಮಾಡುತ್ತಾರೆ ಎಂದುಕೊಂಡಿದ್ದರು ಎನ್ನಿಸುತ್ತದೆ. ಆದರೆ ರವೀನಾರನ್ನು ಕೆಲವರು ಟ್ವೀಟರ್‌ನಲ್ಲೆ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಾಣಿಗಳನ್ನು ಈ ರೀತಿ ಹಿಂಸಿಸುವುದು ಸರಿಯಲ್ಲ ಎಂದಿದ್ದಾರೆ. ಈ ಟ್ವೀಟ್ ಸಾಕಷ್ಟು ಟ್ರೋಲ್‌ಗೂ ಒಳಗಾಗಿದೆ. ಕೆಲವರು ಸಂಜಯ್ ಲೀಲಾ ಭನ್ಸಾಲಿ ಅವರ ’ಬಿಲ್ಲಿವತಿ’ ಸಿನಿಮಾದ ಬೆಕ್ಕಿದು ಎಂದು ತಮಾಷೆ ಮಾಡಿದ್ದಾರೆ.
Comments are closed.