ಮನೋರಂಜನೆ

ಧೋನಿ ಭೇಟಿ ಮಾಡಿದ ಈಕೆ ಯಾರು ಗೊತ್ತೇ?

Pinterest LinkedIn Tumblr


ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಹುತೇಕ ಪಂದ್ಯಗಳಲ್ಲಿ ಚಿಯರ್ ಮಾಡಲು ಅಭಿಮಾನಿಯೊಬ್ಬಳು ಕಾಣಿಸಿಕೊಳ್ಳುತ್ತಿದ್ದರು.

ಕೊನೆಗೂ ಆಕೆ ಯಾರೆಂಬ ಗುಟ್ಟು ರಟ್ಟಾಗಿದೆ. ಆಕೆ ಬೇರೆ ಯಾರು ಅಲ್ಲ. ಚೆನ್ನೈ ತಂಡದ ಸ್ಪೀಡ್ ಸ್ಟಾರ್ ದೀಪಕ್ ಚಹರ್ ಅವರ ಸಹೋದರಿ ಮಾಲ್ತಿ ಚಹರ್.

ಧೋನಿ ಕಟ್ಟಾ ಅಭಿಮಾನಿಯಾಗಿರುವ ಮಾಲ್ತಿ, ಐಪಿಎಲ್ ಆರಂಭದ ಸಂದರ್ಭದಲ್ಲಿ ತಮ್ಮ ಮೆಚ್ಚಿನ ಆಟಗಾರನನ್ನು ಭೇಟಿ ಮಾಡಿದ್ದರು. ಅಲ್ಲದೆ ಧೋನಿ ಅವರನ್ನು ‘ಕೂಲ್, ಸ್ವೀಟ್‌ಹಾರ್ಟ್’ ಎಂದು ಕೊಂಡಾಡಿದ್ದರು.

ಅಷ್ಟೇ ಯಾಕೆ ಡ್ವೇನ್ ಬ್ರಾವೋ ಅವರ ‘ರನ್ ದಿ ವರ್ಲ್ಡ್’ ಹಾಡಿಗೂ ದೀಪಕ್ ಚಹರ್ ಜತೆಗೆ ಹೆಜ್ಜೆ ಹಾಕಿದ್ದಾರೆ.

ಅತ್ತ ಸ್ನಾಯು ಸೆಳೆತೆಕ್ಕೊಳಗಾಗಿರುವ ದೀಪಕ್ ಚಹರ್‌ಗೆ ಎರಡು ವಾರಗಳ ವಿಶ್ರಾಂತಿ ಸೂಚಿಸಲಾಗಿದೆ.

Comments are closed.