ಕರ್ನಾಟಕ

ವಿಧಾನಸೌಧ ಮುಂಬಾಗದಲ್ಲಿ ಕುರಾನ್ ಹರಿದು ಚೆಲ್ಲಿದ ದುಷ್ಟರು

Pinterest LinkedIn Tumblr


ಬೆಂಗಳೂರು: ಇಲ್ಲಿನ ವಿಧಾನ ಸೌಧ ಮುಂಬಾಗದಲ್ಲಿ ಪವಿತ್ರ ಕುರಾನನ್ನು ಹರಿದು ದಾರಿಯುದ್ದಕ್ಕೂ ಚೆಲ್ಲಿಕೊಂಡು ಹೋದ ಘಟನೆ ಇಂದು ನಡೆದಿದೆ. ಕಿಡಿಗೇಡಿಗಳು ಕುರಾನ್ ಪುಟಗಳನ್ನು ಹರಿದು ವಿಧಾನಸೌಧ ಮುಂಬಾಗದ ರಸ್ತೆಯುದ್ದಕ್ಕೂ ಚೆಲ್ಲಿದ್ದಾರೆ.
ಪ್ರತ್ಯಕ್ಷ ದರ್ಶಿಗಳ ಪ್ರಕಾರ ಚಲಿಸುವ ನಸ್ಸಿನಿಂದ ಯಾರೋ ದುಷ್ಟರು ಈ ಕೃತ್ಯ ಎಸಗಿದ್ದಾರೆ.

ಚುನಾವಣೆ ಸಮುವಾಗಿರುವುದರಿಂದ ಯಾರೋ ಕಿಗೇಡಿಗಳು ಸಾಮರಸ್ಯ ಕದಡಲು ಈ ಕೃತ್ಯ ಎಸಗಿರುವ ಶಂಕೆ ಇದ್ದು, ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕೆಲವೇ ಕ್ಷಣಗಲಲ್ಲಿ ಸ್ಥಳಕ್ಕೆ ನೂರಾರು ಜನ ಆಗಮಿಸಿದ್ದರು. ಶಕ್ತಿ ಸೌಧದ ಮುಂದೆಯೇ ಈ ದುಷ್ಕೃತ್ಯ ನಡೆದಿರುವುದು ಆತಂಕ ಉಂಟು ಮಾಡಿದೆ.

ಮುಸ್ಲಿಂ ಸಂಘಟನೆಗಳ ಹಲವಾರು ನಾಯಕರು ಸ್ಥಳಕ್ಕೆ ಆಗಮಿಸಿ, ಕುರಾನ್ ಪುಟಗಳನ್ನು ರಸ್ತೆಯಿಂದ ತೆರವುಗೊಳಿಸಿದರು. ಪ್ರಕರಣ ಸಂಬಂಧ ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಶೀಘ್ರ ತನಿಖೆ ನಡೆಸಿ ದುಷ್ಟರನ್ನು ಬಂಧಿಸಬೇಕೆಂದು ಮುಸ್ಲಿಂ ನಾಯಕರು ಆಗ್ರಹಿಸಿದ್ಧಾರೆ.

Comments are closed.