ಮನೋರಂಜನೆ

ಬೆಂಗಳೂರಿನಲ್ಲೇ ಕನ್ನಡದ ಕೋಟ್ಯಧಿಪತಿ ಶೂಟಿಂಗ್

Pinterest LinkedIn Tumblr


ಕನ್ನಡದ ಕೋಟ್ಯಧಿಪತಿ ಹೊಸ ಸೀಸನ್‌ ಆರಂಭವಾಗುತ್ತಿದ್ದು ಆಡಿಷನ್ಸ್‌ಗೆ ಡೇಟ್ ಫಿಕ್ಸ್ ಆಗಿದೆ. ಇದೇ ಮೇ 7ರಂದು ಸಂಜೆ 7.30ಕ್ಕೆ ಕನ್ನಡದ ಕೋಟ್ಯಧಿಪತಿ ಆಡಿಷನ್ಸ್ ಆರಂಭವಾಗಲಿದೆ. ಸ್ಪರ್ಧಿಸಲು ಇಚ್ಛಿಸುವವರು ವಾಹಿನಿ ಮತ್ತು ವಾಯ್ಸ್ ಕರೆಯಲ್ಲಿನ ಪ್ರಶ್ನೆಗಳಿಗೆ ಉತ್ತರಿಸಬೇಕು. ಇದೇ ಮೊದಲ ಬಾರಿಗೆ ರಮೇಶ್ ಅರವಿಂದ್ ಅವರ ನಿರೂಪಣೆಯಲ್ಲಿ ಈ ಕಾರ್ಯಕ್ರಮ ಮೂಡಿಬರುತ್ತಿರುವುದು ಈ ಸಲದ ವಿಶೇಷ.

ಆಡಿಷನ್‍ನಲ್ಲಿ ಗೆದ್ದರೆ ಮುಂದಿನ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ಒಟ್ಟು 10 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಶೋನ ಭಾಗವಾಗಿ ಸ್ಪರ್ಧಿಗಳಿಗೆ 18 ವರ್ಷ ವಯಸ್ಸಾಗಿರಬೇಕು. ವಿದ್ಯಾರ್ಹತೆಯ ವಿಚಾರದಲ್ಲಿ ಯಾವುದೇ ಮಾನದಂಡಗಳಿಲ್ಲದಿದ್ದರೂ ಸ್ಪರ್ಧಿಗಳ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಬಾರದು.

ಹಾಟ್ ಸೀಟ್‌ ಮೇಲೆ ಕುಳಿತ ಬಳಿಕ 15 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದರೆ 1 ಕೋಟಿ ರೂ. ಗೆಲ್ಲುವ ಅವಕಾಶ ಇದೆ. ಈ ಸಲ ಇಡೀ ಕಾರ್ಯಕ್ರಮವನ್ನು ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬೆಂಗಳೂರಿನಲ್ಲೇ ಚಿತ್ರೀಕರಿಸಲಾಗುತ್ತಿದೆ. ಇದು ಮೂರನೇ ಸೀಸನ್ ಆಗಿದ್ದು ಜೂನ್‍ನಿಂದ ಕಿರುತೆರೆ ವೀಕ್ಷಕರ ಮುಂದೆ ಬರುತ್ತಿದೆ.

ಈ ಜನಪ್ರಿಯ ಕಾರ್ಯಕ್ರಮ ಈಗಾಗಲೆ 120 ದೇಶಗಳಲ್ಲಿ 80 ಭಾಷೆಗಳಲ್ಲಿ ಪ್ರಸಾರವಾಗಿದ್ದು, ಇಂತಹ ಕಾರ್ಯಕ್ರಮವನ್ನು ಕನ್ನಡದಲಿ ನಡೆಸಿಕೊಡುತ್ತಿರುವ ಬಗ್ಗೆ ಹೆಮ್ಮೆ ಅನ್ನಿಸುತ್ತಿದೆ ಎಂದಿದ್ದಾರೆ ರಮೇಶ್ ಅರವಿಂದ್. ಮೊದಲು ರಾಕಿಂಗ್ ಸ್ಟಾರ್ ಯಶ್ ಅವರನ್ನು ನಿರೂಪಕರಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಕೊನೆಗೆ ರಮೇಶ್ ಅರವಿಂದ್ ಅವರ ಪಾಲಾಗಿದೆ ಕನ್ನಡದ ಕೋಟ್ಯಧಿಪತಿ.

Comments are closed.