ಮನೋರಂಜನೆ

ಎರಡು ಬಾರಿ ವೈವಾಹಿಕ ಬಂಧನಕ್ಕೆ ಚಿರು-ಮೇಘನಾ

Pinterest LinkedIn Tumblr


ಬೆಂಗಳೂರು: ಸ್ಯಾಂಡಲ್ ವುಡ್ ಯುವ ಜೋಡಿ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಭಾನುವಾರ ಕ್ರಿಶ್ಚಿಯನ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೇ.2ರಂದು ಅರಮನೆ ಮೈದಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ನಡೆಯಲಿದೆ.

ಬೆಂಗಳೂರು ಕೋರಮಂಗಲದ ಸೇಂಟ್ ಆಂಥೋನಿಸ್ ಫೈರಿ ಚರ್ಚ್ ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹ ಬಂಧನಕ್ಕೆ ಚಿರು-ಮೇಘನಾ ರಾಜ್ ಒಳಗಾದರು. ಕುಟುಂಬದವರು, ಬಂಧುಗಳು ಹಾಗೂ ಆತ್ಮೀಯರು ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ನೆರವೇರಿದ್ದು, ನವಜೋಡಿಗೆ ಚಿತ್ರರಂಗದ ಗಣ್ಯರು, ಕಲಾವಿದರು ಶುಭ ಹಾರೈಸಿದರು.

Comments are closed.