ಮನೋರಂಜನೆ

ನಟ ದರ್ಶನ್‍ರನ್ನು ಮದುವೆಗೆ ಆಹ್ವಾನಿಸಿದ ಅಭಿಮಾನಿ ಏನು ಉಡುಗೊರೆ ನೀಡಿದ್ರು ಗೊತ್ತೇ..?

Pinterest LinkedIn Tumblr

ಬೆಂಗಳೂರು: ಪ್ರತಿಯೊಬ್ಬ ಅಭಿಮಾನಿಯೂ ತಮ್ಮ ನೆಚ್ಚಿನ ಸ್ಟಾರ್ ಗಳಿಗಾಗಿ ವಿಶೇಷವಾಗಿ ಏನನ್ನಾದರೂ ಕೊಡುತ್ತಿರುತ್ತಾರೆ. ಈಗ ದರ್ಶನ್ ಅಭಿಮಾನಿಯೊಬ್ಬರು ಭಿನ್ನವಾದ ಉಡುಗೊರೆಯನ್ನು ನೀಡಿ ತಮ್ಮ ಮದುವೆಗೆ ಆಹ್ವಾನ ಮಾಡಿದ್ದಾರೆ.

ಕಿರಣ್ ತಮ್ಮ ಮದುವೆಗೆ ನೆಚ್ಚಿನ ನಾಯಕ ನಟನನ್ನು ಆಹ್ವಾನ ಮಾಡಲು ನಿರ್ಧರಿಸಿದ್ದಾರೆ. ಆದರೆ ಕಿರಣ್ ಲಗ್ನ ಪತ್ರಿಕೆ ಕೊಟ್ಟು ಆಹ್ವಾನ ಮಾಡುವುದು ಸಾಮಾನ್ಯವಾಗುತ್ತದೆ. ನಾನು ಬೇರೆ ರೀತಿ ಅವರಿಗೆ ಏನಾನ್ನಾದರೂ ಉಡುಗೊರೆಯಾಗಿ ನೀಡಿ ಮದುವೆಗೆ ಆಹ್ವಾನಿಸಬೇಕು ಎಂದು ಯೋಚನೆ ಮಾಡಿದ್ದಾರೆ. ಅದೇ ರೀತಿ ಹತ್ತು ದಿನದಲ್ಲಿ ದುರ್ಯೋಧನನ ಲುಕ್ ನಲ್ಲಿರುವ ದರ್ಶನ್ ಅವರ ಫೋಟೋವನ್ನು ಪೇಂಟ್ ಮಾಡಿಸಿ ತೆಗೆದುಕೊಂಡು ಹೋಗಿದ್ದಾರೆ.

ಸಾಮಾನ್ಯವಾಗಿ ಸ್ಟಾರ್ ಗಳು ಅಭಿಮಾನಿಗಳಿಂದ ಯಾವುದೇ ಉಡುಗೊರೆಯನ್ನು ನಿರೀಕ್ಷೆ ಮಾಡುವುದಿಲ್ಲ. ತಮ್ಮ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದರೆ ಸಾಕು ಎಂದು ಕೊಂಡಿರುತ್ತಾರೆ. ಆದರೆ ತಮ್ಮ ಅಭಿಮಾನಿ ನೀಡಿದ ಅಪರೂಪದ ಉಡುಗೊರೆಯನ್ನು ನೋಡಿ ದರ್ಶನ್ ಸ್ಟಾರ್ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.

ಪ್ರಸ್ತುತ ದರ್ಶನ್ ಕುರುಕ್ಷೇತ್ರ ಸಿನಿಮಾ ಶೂಟಿಂಗ್ ಮುಗಿಸಿದ್ದು, ಈಗ ಯಜಮಾನ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿದ್ದಾರೆ.

Comments are closed.