ಮನೋರಂಜನೆ

ಹೊಸ ಬೈಕ್‌ನಲ್ಲಿ ಕಿಚ್ಚನ ಬೆಂಗ್ಳೂರ್‌ ರೌಂಡ್ಸ್‌

Pinterest LinkedIn Tumblr


ನಟ ಸುದೀಪ್‌ ಅವರಿಗೆ ಬೈಕ್‌ಗಳ ಮೇಲೇ ಸ್ವಲ್ಪ ಆಸಕ್ತಿ ಜಾಸ್ತಿ. ಇತ್ತೀಚೆಗೆ ಒಂದು ಬೈಕ್‌ ಕೊಂಡಿದ್ದು,ಅದನ್ನು ಕೊಂಡಕೊಂಡ ಕೂಡಲೇ ಲಾಂಗ್‌ ಡ್ರೈವ್‌ ಹೋಗಿದ್ದಾರೆ. ಸುದೀಪ್‌ ಬಳಿ ಈಗಾಗಲೇ ಸಾಕಷ್ಟು ಕಾರ್‌ ಮತ್ತು ಬೈಕ್‌ಗಳಿದ್ದು, ಆ ಲೀಸ್ಟ್‌ಗೆ ಈ ಐಷಾರಾಮಿ ಬೈಕ್‌ ಸಹ ಸೇರಿಕೊಂಡಿದೆ.

ಬಿಎಂಡಬ್ಲ್ಯೂ ಆರ್‌ 1200 ಬೈಕ್‌ನ್ನು ಖರೀದಿ ಮಾಡಿರುವ ಕಿಚ್ಚ ಸುದೀಪ್‌ ಅದರಲ್ಲಿ ಸಿಲಿಕಾನ್‌ ಸಿಟಿ ಪೂರ್ತಿ ಸುತ್ತಾಡಿದ್ದಾರೆ. ಈ ಬೈಕ್‌ ಕೊಂಡುಕೊಳ್ಳುವಾಗ ಸುದೀಪ್‌ ಜತೆ ನಟ ಚಂದನ್‌ ಕೂಡಾ ಹೋಗಿದ್ದಾರೆ. ಕಿಚ್ಚ ಹೊಸ ಬೈಕ್‌ ಖರೀದಿ ಮಾಡಿ ಅದನ್ನು ರೈಡಿಂಗ್‌ ಮಾಡುತ್ತಿರುವ ವಿಡಿಯೋವನ್ನು ನಿರ್ದೇಶಕ ಕೃಷ್ಣ ಟ್ವಿಟರ್‌ನಲ್ಲಿ ಹಾಕಿದ್ದಾರೆ. ಈ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್‌ ಆಗಿದೆ.

Comments are closed.