ಕರ್ನಾಟಕ

24 ದಿನಗಳಲ್ಲಿ ನಾನು ಸಿಎಂ ಆಗಲಿದ್ದೇನೆ: ನಾಮಪತ್ರ ಸಲ್ಲಿಸಿ ಬಿಎಸ್‌ವೈ

Pinterest LinkedIn Tumblr

ಶಿಕಾರಿಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಶಿಕಾರಿಪುರದಲ್ಲಿ ಗುರುವಾರ ಅಬ್ಬರದೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು ‘ನಾನು 24 ದಿನಗಳಲ್ಲಿ ಮುಖ್ಯಮಂತ್ರಿಯಾಗಲಿದ್ದೇನೆ.150 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಇಂದಿನಿಂದ ರಾಜ್ಯದ ವಿವಿಧೆಡೆ ಎಡೆಬಿಡದೆ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಶಿಕಾರಿಪುರದಲ್ಲಿ ನನ್ನ ಎದುರಾಳಿಯ ಠೇವಣಿ ಕಳೆಯಬೇಕು’ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ನಾಮಪತ್ರ ಸಲ್ಲಿಕೆವೇಳೆ ಛತ್ತೀಸ್‌ಘಡ ಮುಖ್ಯಮಂತ್ರಿ ರಮಣ್‌ ಸಿಂಗ್‌, ಸಂಸದ ಶ್ರೀರಾಮುಲು, ಚೆನ್ನಪಟ್ಟಣ ದ ಸಿ.ಪಿ.ಯೋಗೇಶ್ವರ್‌ ಮೊದಲಾದ ನಾಯಕರು ಉಪಸ್ಥಿತರಿದ್ದರು. ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಹಾಜರಿದ್ದರು.

ಇಂದಿನಿಂದ ಚುನಾವಣೆ ಮುಗಿಯುವ ವರೆಗೆ ಯಡಿಯೂರಪ್ಪ ಅವರು ಶಿಕಾರಿಪುರದಲ್ಲಿ ಯಾವುದೇ ಪ್ರಚಾರ ಮಾಡುವುದಿಲ್ಲ ಎಂದು ತಿಳಿದು ಬಂದಿದೆ.

-Udayavani

Comments are closed.