ಮನೋರಂಜನೆ

ಆಂಜನೇಯನ ಭಾವಚಿತ್ರ ಹಾಕಿರುವ ಕಾರುಗಳಿಗೆ ಹತ್ತಬೇಡಿ…ಅವರು ರೇಪಿಸ್ಟ್ ಗಳು: ವಿವಾದತ್ಮಾಕ ಪೋಸ್ಟ್ ಹಾಕಿದ ನಟಿ ರಶ್ಮಿ

Pinterest LinkedIn Tumblr

ಬೆಂಗಳೂರು: ನಗರದಲ್ಲಿ ಆಂಜನೇಯನ ಭಾವಚಿತ್ರವುಳ್ಳ ಉಬರ್ ಕ್ಯಾಬ್ ಗಳನ್ನು ಹತ್ತಬೇಡಿ. ಇದೆಲ್ಲ ಹಿಂದುತ್ವ ಸಂಕೇತವಾಗಿದ್ದು, ಇಂತಹ ಭಾವಚಿತ್ರ ಹಾಕಿಕೊಂಡವರು ರೇಪಿಸ್ಟ್ ಗಳು ಅಂತಾ ವಿವಾದತ್ಮಾಕ ಪೋಸ್ಟ್ ಹಾಕಿಕೊಂಡು ರಶ್ಮಿ ಸುದ್ದಿಯಾಗಿದ್ದಾರೆ.

ಈ ಹಿಂದೆ ಕಿಸ್ ಆಫ್ ಲವ್ ಆಯೋಜನೆ ಮಾಡಿ ಸುದ್ದಿಯಾಗಿ, ಕೇರಳದಲ್ಲಿ ಸೆಕ್ಸ್ ರ‍್ಯಾಕೆಟ್ ಸಿಕ್ಕಿಬಿದ್ದಿದ್ದ ರಶ್ಮಿ ನಾಯರ್ ಈಗ ವಿವಾದಾತ್ಮಕ ಪೋಸ್ಟ್ ಹಾಕಿಕೊಂಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?: ನಾನು ಬೆಂಗಳೂರಿನ ಉಬರ್ ಕ್ಯಾಬ್ ಬಳಸುತ್ತಿರುವ ಗ್ರಾಹಕಿಯಾಗಿದ್ದು, ಹಲವು ಬಾರಿ ನಾನೊಬ್ಬಳೆ ಉಬರ್ ಪ್ರಯಾಣ ಮಾಡುತ್ತಿರುತ್ತೇನೆ. ನಾನೊಬ್ಬಳಲ್ಲದೇ ನನ್ನ ಜೊತೆ ಕೆಲಸ ಮಾಡಿಕೊಂಡಿರುವ ಹಲವು ಮಹಿಳಾ ಸಹದ್ಯೋಗಿಗಳು ಸಹ ಉಬರ್ ಕ್ಯಾಬ್ ನಲ್ಲಿ ಒಬ್ಬೊಬ್ಬರೆ ಸಂಚರಿಸುತ್ತಾರೆ. ಕೆಲವು ಕ್ಯಾಬ್ ಗಳ ಮೇಲೆ ಹಿಂದುತ್ವದ ಸಂಕೇತವುಳ್ಳ ರುದ್ರ ಹನುಮಾನ್ ಮುಂತಾದ ಭಾವಚಿತ್ರಗಳನ್ನು ಹಾಕಲಾಗುತ್ತದೆ. ಸಾಕಷ್ಟು ಹಿಂದುತ್ವ ಸಂಘಟನೆಗಳು ಮತ್ತು ಮುಖಂಡರು ಕಥುವಾದಲ್ಲಿ ನಡೆದ ರೇಪ್ ಪ್ರಕರಣದ ಆರೋಪಿಗಳ ಪರವಾಗಿ ವಾದಿಸುತ್ತಾರೆ. ನಾನು ಮತ್ತು ನನ್ನ ಸಹದ್ಯೋಗಿಗಳು ಈ ರೀತಿಯ ಹಿಂದುತ್ವದ ಸಂಕೇತವುಳ್ಳ ಉಬರ್ ಕ್ಯಾಬ್ ನಲ್ಲಿ ಪ್ರಯಾಣಿಸಲು ಭಯವಾಗುತ್ತಿದೆ. ಹಾಗಾಗಿ ಹಿಂದುತ್ವದ ಸಂಕೇತ, ಭಾವಚಿತ್ರ ಮತ್ತು ಚಿಹ್ನೆವುಳ್ಳ ಕ್ಯಾಬ್‍ಗಳಲ್ಲಿ ಇನ್ನ್ಮುಂದೆ ಸಂಚರಿಸಲ್ಲ. ಈ ರೀತಿಯ ಕ್ಯಾಬ್‍ಗಳು ಬಂದರೆ ನನ್ನ ಬುಕ್ಕಿಂಗ್ ಕ್ಯಾನ್ಸಲ್ ಮಾಡಿಕೊಳ್ಳುತ್ತೇನೆ. ರೇಪಿಸ್ಟ್ ಗಳಿಗೆ ಮತ್ತು ಅದನ್ನು ಬೆಂಬಲಿಸುವರಿಗೆ ನನ್ನ ಹಣವನ್ನಿ ನೀಡಲು ಇಷ್ಟಪಡುವುದಿಲ್ಲ ಅಂತಾ ಬರೆದುಕೊಂಡು ರುದ್ರ ಹನುಮಾನ್ ಭಾವಚಿತ್ರವುಳ್ಳ ಕ್ಯಾಬ್ ಫೋಟೋ ಹಾಕಿಕೊಂಡಿದ್ದಾರೆ.

Comments are closed.