ಕರ್ನಾಟಕ

ಸಚಿವ ಅನಂತ್ ಕುಮಾರ್ ಹೆಗ್ಡೆ ಕಾರು ಅಪಘಾತ ಹಿನ್ನೆಲೆ: ಸಿಎಂ ವಿರುದ್ಧ ಸಂಸದ ಪ್ರತಾಪ್ ಸಿಂಹ ಏನು ಹೇಳಿದ್ರು ನೋಡಿ…

Pinterest LinkedIn Tumblr

ಬೆಂಗಳೂರು: ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರ ಕಾರ್ ಅಪಘಾತವಾಗಿರುವ ಹಿನ್ನೆಲೆಯಲ್ಲಿ ಇದೀಗ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿಯವರಿಗೆ ಸವಾಲೆಸೆದಿದ್ದಾರೆ.

ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ, ನೀವು ಅನಂತ್‍ಕುಮಾರ್ ಹೆಗ್ಡೆಯವರನ್ನು ರಾಜಕೀಯವಾಗಿ ಎದುರಿಸಿ. ಅದನ್ನ ಬಿಟ್ಟು ಅವರನ್ನ ಕೊಲೆ ಮಾಡಿಸುವ ಪ್ರಯತ್ನ ಮಾಡಬೇಡಿ. ಆ ರೀತಿಯ ಪ್ರಯತ್ನ ಮಾಡಿದ್ರೆ ನಾವು ಸುಮ್ಮನಿರೋಲ್ಲ ಅಂತ ಹೇಳಿ ಸಿದ್ದರಾಮಯ್ಯ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಸಿದ್ದರಾಮಯ್ಯನವರೇ ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ. ಆ ಹೋರಾಟದ ವೇಳೆ ನಿಮ್ಮನ್ನ ಯಾರು ಕಾಪಾಡುವುದಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಚಾಮುಂಡೇಶ್ವರಿ ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ ಅವರು ಮೂರನೇ ಹಂತದಲ್ಲಿ ಏಳನೇ ದಿನ ಪ್ರಚಾರ ಕೈಗೊಳ್ಳಲಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ 20 ಹಳ್ಳಿಗಳಲ್ಲಿ ಪ್ರಚಾರ ನಡೆಸಲಿರುವ ಸಿದ್ದರಾಮಯ್ಯ ಜಟ್ಟಿಹುಂಡಿ, ಬೀರಿಹುಂಡಿ, ಶೆಟ್ಟನಾಯಕಹಳ್ಳಿ, ಗೋಹಳ್ಳಿ, ಕುಮಾರಬೀಡು ಮಾವಹಳ್ಳಿ, ನುಗ್ಗಹಳ್ಳಿ, ಡಿಎಂಜಿ ಹಳ್ಳಿ, ಮಾಣಿಕ್ಯಪುರ, ದೊಡ್ಡಟ್ಟಿಹುಂಡಿ, ಕಮ್ಮರಹಳ್ಳಿ, ಮರಯ್ಯನಹುಂಡಿ, ಕಟ್ಟೆಹುಂಡಿ, ನಾಗವಾಲ.ಸೀಗಳ್ಳಿ, ಬೊಮ್ಮನಹಳ್ಳಿ, ಚಿಕ್ಕೆಗೌಡನಕೊಪ್ಪಲು, ಹಳೆಗೌಡನಕೊಪ್ಪಲು, ಲಿಂಗದೇವರುಕೊಪ್ಪಲು, ಇಲವಾಲ ಗ್ರಾಮಗಳಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ.

Comments are closed.