ಮನೋರಂಜನೆ

ಪತಿ ಮತ್ತು ಮಾವನೊಂದಿಗೆ ಜೆಡಿಎಸ್ ಸೇರಿದ ನಟಿ ಅಮೂಲ್ಯ

Pinterest LinkedIn Tumblr

ಬೆಂಗಳೂರು: ನಟಿ ಅಮೂಲ್ಯ ತಮ್ಮ ಪತಿ ಜಗದೀಶ್ ಮತ್ತು ಮಾವ ರಾಮಚಂದ್ರ ಅವರೊಂದಿಗೆ ಮಂಗಳವಾರ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ.

ಅಮೂಲ್ಯ ಮಾವ ರಾಮಚಂದ್ರ ರಾಜ ರಾಜೇಶ್ವರಿ ನಗರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಬಿಜೆಪಿ ಪಕ್ಷದಲ್ಲಿ ನನಗೆ ಅನ್ಯಾಯ ಆಗಿದೆ. ಹೀಗಾಗಿ ನಾನು ಜೆಡಿಎಸ್​ಗೆ ಸೇರಿದ್ದೇನೆ. ಟಿಕೆಟ್ ಕೊಡುವುದು ಬಿಡುವುದು ದೇವೇಗೌಡರಿಗೆ ಬಿಟ್ಟಿದ್ದು. ಎರಡು ಬಾರಿ ಪ್ರಯತ್ನ ಪಟ್ಟರೂ ಬಿಜೆಪಿಯಿಂದ ಟಿಕೆಟ್ ಸಿಕ್ಕಿರಲಿಲ್ಲ. ರಾಜಕೀಯ ಜೀವನವೇ ಬೇಡ ಎಂಬಂತಾಗಿತ್ತು. ಹಾಲಿ ಶಾಸಕರ ದೌರ್ಜನ್ಯದ ವಿರುದ್ಧ ಹೋರಾಡಲು ಜೆಡಿಎಸ್​ಗೆ ಸೇರಿದ್ದೇನೆ ಎಂದು ಹೇಳಿದ್ದಾರೆ.

ಇನ್ನೂ ಈ ವೇಳೆ ಮಾತನಾಡಿದ ನಟಿ ಅಮೂಲ್ಯ ನನಗೆ ರಾಜಕೀಯದ ಬಗ್ಗೆ ಅಷ್ಟೊಂದು ಗೊತ್ತಿಲ್ಲ, ನನ್ನ ಮಾವನಿಗೆ ಟಿಕೆಟ್ ಸಿಕ್ಕರೇ ಅವರ ಪರವಾಗಿ ಪ್ರಚಾರ ನಡೆಸುತ್ತೇನೆ ಎಂದು ಹೇಳಿದ್ದಾರೆ.ನಟಿ ಅಮೂಲ್ಯ ಜೆಡಿಎಸ್​ನ ಸ್ಟಾರ್​ ಕ್ಯಾಂಪೇನರ್​ಆಗಲಿದ್ದಾರೆ. ಸಿ.ವಿ.ರಾಮನ್ ನಗರ ಟಿಕೆಟ್ ಆಕಾಂಕ್ಷಿ ಪಿ.ರಮೇಶ್, ಚಿಕ್ಕಪೇಟೆಯ ಹೇಮಚಂದ್ರಸಾಗರ್, ಆರ್​ಆರ್​ ನಗರದ ರಾಮಚಂದ್ರ, ಬಸವ ಕಲ್ಯಾಣ ಕ್ಷೇತ್ರದ ಡಾ.ಮೂಳೆ ಜೆಡಿಎಸ್​​ಗೆ ಸೇರ್ಪಡೆಯಾದರು.

ದಿನೇ ದಿನೇ ಪಕ್ಷದ ಶಕ್ತಿ ಹೆಚ್ಚುತ್ತಿದೆ. ಇದೆಲ್ಲಾ ದೇವರ ಆಟ. ಬೇರೆ ಪಕ್ಷದ ಹಲವು ಮುಖಂಡರು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ನಾಳೆ ಕೂಡ ಮತ್ತಷ್ಟು ಜನ ಪಕ್ಷ ಸೇರ್ಪಡೆ ಆಗಲಿದ್ದಾರೆ ಎಂದು ಜೆಡಿಎಸ್​ ರಾಷ್ಟ್ರಾಧ್ಯಕ್ಷ ಎಚ್​.ಡಿ.ದೇವೇಗೌಡ ತಿಳಿಸಿದ್ದಾರೆ.

Comments are closed.