ರಾಷ್ಟ್ರೀಯ

ಉತ್ತರ ಪ್ರದೇಶದಲ್ಲಿ ಮದುವೆ ಮನೆಯಿಂದ 8 ವರ್ಷದ ಬಾಲಕಿ ಎತ್ತಿಕೊಂಡುಹೋಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ ಕಾಮುಕ !

Pinterest LinkedIn Tumblr

ಲಖನೌ: ಕಾಶ್ಮೀರದ ಕತುವಾ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ ದೇಶದಾದ್ಯಂತ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಅಂತಹದ್ದೇ ಮತ್ತೊಂದು ಪ್ರಕರಣವೊಂದು ಉತ್ತರಪ್ರದೇಶ ಲಖನೌನಲ್ಲಿ ನಡೆದಿದೆ.

ಪೋಷಕರೊಂದಿಗೆ ಮದುವೆಗೆ ತೆರಳಿದ್ದ ಬಾಲಕಿಯನ್ನು ಕಾಮುಕನೋರ್ವ ಹೊತ್ತೊಯ್ದಿದ್ದು, ನಂತರ ಆಕೆಯ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ಮಾಡಿದ್ದಾನೆ.

ಮದುವೆಯೊಂದರಲ್ಲಿ ಬಾಲಕಿ ಹಾಗೂ ಆಕೆ ಕುಟುಂಬಸ್ಥರು ಪಾಲ್ಗೊಂಡಿದ್ದರು. ಬಾಲಕಿಯ ಪೋಷಕರು ಸಮಾರಂಭದ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಬಾಲಕಿಯನ್ನು ಕಟ್ಟಡವೊಂದಕ್ಕೆ ಹೊತ್ತೊಯ್ದ ಕಾಮುಕ ಆಕೆ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದಾರೆ.

ಹಲವು ಗಂಟೆಗಳಾದರೂ ಬಾಲಕಿ ಕಾಣದೇ ಹೋದ್ದರಿಂದ ಗಾಬರಿಗೊಂಡ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ಸಂಬಂಧ ಆರೋಪಿ ಸೋನು ಎಂಬಾತನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Comments are closed.