ಮನೋರಂಜನೆ

ಖ್ಯಾತ ಪಂಜಾಬಿ ಗಾಯಕ ಪರ್ಮಿಶ್ ಮೇಲೆ ಗುಂಡಿನ ದಾಳಿ; ದಾಳಿ ನಡೆಸಿದ್ದು ತಾನೇ ಎಂದ ಗ್ಯಾಂಗ್ ಸ್ಟರ್ ದಿಲ್ ಪ್ರೀತ್ ಸಿಂಗ್

Pinterest LinkedIn Tumblr

ಚಂಡಿಗಢ: ಪಂಜಾಬಿ ಗಾಯಕ ಪರ್ಮಿಶ್ ವರ್ಮಾ ಅವರ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ಮೊಹಾಲಿಯಲ್ಲಿ ಈ ಘಟನೆ ನಡೆಸಿದ್ದು ಪರ್ಮಿಶ್ ವರ್ಮಾ ಮನೆಗೆ ವಾಪಸಾಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಗಳು ಬಂದು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಗುಂಡಿನ ದಾಳಿಯಲ್ಲಿ ಪರ್ಮಿಶ್ ಅವರ ಕಾಲಿಗೆ ಗುಂಡೇಟು ತಗುಲಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕುಲ್ ದೀಪ್ ಚಹಲ್ ಹೇಳಿದ್ದಾರೆ.

ಇನ್ನು ಗುಂಡಿನ ದಾಳಿಯನ್ನು ತಾವೇ ನಡೆಸಿದ್ದಾಗಿ ಗ್ಯಾಂಗ್ ಸ್ಟರ್ ದಿಲ್ ಪ್ರೀತ್ ಸಿಂಗ್ ದಹನ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ.

ಸದ್ಯ ಪರ್ಮಿಶ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Comments are closed.