ರಾಷ್ಟ್ರೀಯ

ಉನ್ನಾವೋ, ಕತುವಾ ಅತ್ಯಾಚಾರ ಪ್ರಕರಣ; ನ್ಯಾಯ ದೊರಕಿಸಿಕೊಡುವಂತೆ ಬಾಲಿವುಡ್ ಆಗ್ರಹ

Pinterest LinkedIn Tumblr

ಮುಂಬೈ: ಉನ್ನಾವೋ ಹಾಗೂ ಕತುವಾದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳಿಗೆ ತೀವ್ರ ಆಕ್ರೋಶಗಳನ್ನು ವ್ಯಕ್ತಪಡಿಸಿರುವ ಬಾಲಿವುಡ್, ನ್ಯಾಯ ದೊರಕಿಸಿಕೊಡುವಂತೆ ಸರ್ಕಾರಕ್ಕೆ ಆಗ್ರಹಿಸುತ್ತಿದೆ.

ಜಾವೆದ್ ಅಕ್ತರ್, ಅಭಿಷೇಕ್ ಬಚ್ಚನ್, ಸ್ವರ ಭಾಸ್ಕರ್ ಮತ್ತು ಹನ್ಸಲ್ ಮೆಹ್ತಾ ಅವರು ಘಟನೆಗಳ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದು, ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಉನ್ನಾವೋದಲ್ಲಿ ಯುವತಿಯೊಬ್ಬಳು ತನ್ನ ಮೇಲೆ ಬಿಜೆಪಿ ಸಂಸದ ಕುಲ್ದೀಪ್ ಸಿಂಗ್ ಸೆಂಗಾರ್ ಅವರು ಅತ್ಯಾಚಾರ ನಡೆಸಿದ್ದು ಪೊಲೀಸರ ಕಸ್ಟಡಿಯಲ್ಲಿ ಸಂತ್ರಸ್ತ ಯುವತಿಯ ತಂದೆ ಸಾವನ್ನಪ್ಪಿದ್ದಾರೆ. ಈ ಘಟನೆಗೆ ಇಡೀ ದೇಶದಾದ್ಯಂತ ಆಕ್ರೋಶಗಳು ವ್ಯಕ್ತಪಡಿಸುತ್ತಿದೆ. ಈಗಾಗಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಪ್ರಕರಣ ಸಂಬಂಧ ಸಂಸದನ ವಿರುದ್ಧ ಎಫ್ಐಆರ್ ದಾಖಲಿಸಿದೆ.

ಕತುವಾದಲ್ಲಿ ಆಸಿಫಾ ಎಂಬ 8 ವರ್ಷದ ಬಾಲಕಿ ಮೇಲೆ 6 ಜನರ ಕಾಮುಕರ ಗುಂಪು ಅತ್ಯಾಚಾರ ನಡೆಸಿ, ಹತ್ಯೆ ಮಾಡಿದೆ.

ಬಾಲಕಿಗೆ ಮತ್ತಿನ ಔಷಧಿ ನೀಡಿರುವ ಕಾಮುಕರು ನಂತರ ಆಕೆ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದಾರೆ.

ಪ್ರಕರಣಗಳ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಜಾವೆದ್ ಅಖ್ತರ್ ಅವರು, ಮಹಿಳೆಯರ ಹಕ್ಕಗಳಿಗೆ ಬೆಂಬಲ ನೀಡಲು ಜನರು ಮುಂದಕ್ಕೆ ಬರಲು ಇದು ಸಕಾಲವಾಗಿದೆ. ಮಹಿಳೆಯರಿಗೆ ನ್ಯಾಯ ದೊರಕಬೇಕೆಂದು ಬಯಸುವವರು ಉನ್ನಾವೋ ಹಾಗೂ ಕತುವಾದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ಸಂಬಂಧ ಧನಿಯೆತ್ತಬೇಕು ಎಂದು ಹೇಳಿದ್ದಾರೆ.

ಇದರಂತೆ ಹನ್ಸಲ್ ಮೆಹ್ತಾ ಅವರೂ ಕೂಡ ಟ್ವೀಟ್ ಮಾಡಿದ್ದು, ರಾಷ್ಟ್ರೀಯತೆ ಎಂದರೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.

ಸೋನಮ್ ಕಪೂರ್ ಅವರು ಟ್ವೀಟ್ ಮಾಡಿ, ನಕಲಿ ರಾಷ್ಟ್ರೀವಾದಿಗಳು ಹಾಗೂ ನಕಲಿ ಹಿಂದುಗಳನ್ನು ನೋಡಿದರೆ, ನಾಚಿಕೆ ಹಾಗೂ ಅಸಹ್ಯವಾಗುತ್ತದೆ. ನಮ್ಮ ದೇಶದಲ್ಲಿ ಈ ರೀತಿಯಾಗುತ್ತಿದೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

Comments are closed.